Select Your Language

Notifications

webdunia
webdunia
webdunia
webdunia

ಮಲ್ಲಿಗೆ ಹೂವಿನಿಂದಾಗಿ 1 ಲಕ್ಷ ದಂಡ ಕಟ್ಟಿದ ನಟಿ ನವ್ಯಾ ನಾಯರ್

Navya Nair

Krishnaveni K

ಕೊಚ್ಚಿ , ಸೋಮವಾರ, 8 ಸೆಪ್ಟಂಬರ್ 2025 (09:00 IST)
Photo Credit: X
ಕೊಚ್ಚಿ: ಮಲಯಾಳಂ ಮೂಲದ ಬಹುಭಾಷಾ ನಟಿ ನವ್ಯಾ ನಾಯರ್ ಮಲ್ಲಿಗೆ ಮುಡಿದ ತಪ್ಪಿಗೆ 1.14 ಲಕ್ಷ ರೂ. ದಂಡ ಕಟ್ಟಿದ್ದಾರೆ. ಆದರೆ ಇದು ನಡೆದಿರುವುದು ಆಸ್ಟ್ರೇಲಿಯಾದಲ್ಲಿ.

ಕಾರ್ಯಕ್ರಮವೊಂದಕ್ಕೆಂದು ನವ್ಯಾ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗುವಾಗ ಇರಲಿ ಎಂದು ನವ್ಯಾ 1 ಗೇಣು ಹೂವಿನೊಂದಿಗೆ ವಿಮಾನವೇರಿದ್ದರಂತೆ. ಆದರೆ ಮೆಲ್ಬರ್ನ್ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಅವರನ್ನು ತಡೆದಿದ್ದಾರೆ.

ಆಸ್ಟ್ರೇಲಿಯಾದ ನಿಯಮದ ಪ್ರಕಾರ ಜೈವಿಕ ಅಪಾಯಗಳನ್ನು ತಡೆಯುವ ನಿಟ್ಟಿನಿಂದ ಯಾವುದೇ ಸಸ್ಯದ ಭಾಗವನ್ನಾದರೂ ವಿದೇಶದಿಂದ ತರಬೇಕಾದರೆ ಮೊದಲೇ ಅನುಮತಿ ಪಡೆಯಬೇಕು. ಆದರೆ ಇದರ ಬಗ್ಗೆ ನವ್ಯಾಗೆ ಬಹುಶಃ ಮಾಹಿತಿಯಿರಲಿಲ್ಲ.

ಹೀಗಾಗಿ 1 ಗೇಣು ಮಲ್ಲಿಗೆ ತೆಗೆದುಕೊಂಡಿದ್ದಕ್ಕೆ 1.14 ಲಕ್ಷ ರೂ. ದಂಡ ವಿಧಿಸಲಾಗಿದೆ. ಆಸ್ಟ್ರೇಲಿಯಾದ ಕಾರ್ಯಕ್ರಮವೊಂದರಲ್ಲಿ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಥಿಯೇಟರ್‌ನಲ್ಲಿ 50ನೇ ಸಾಗುತ್ತಿರುವ ಬೆನ್ನಲ್ಲೇ ಒಟಿಟಿಗೆ ಎಂಟಿ ಕೊಡಲು ಸಜ್ಜಾದ ಸು ಫ್ರಮ್ ಸೋ