ಬೆಂಗಳೂರು: ಸು ಫ್ರಮ್ ಸೋ ಸಿನಿಮಾ ಸಕ್ಸಸ್ ನಲ್ಲಿ ತೇಲುತ್ತಿರುವ ನಟ, ನಿರ್ಮಾಪಕ ರಾಜ್ ಬಿ ಶೆಟ್ಟಿ ದಿಡೀರ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಒಂದು ಮೆಸೇಜ್ ಹಾಕಿ ಶಾಕ್ ಕೊಟ್ಟಿದ್ದಾರೆ.
ರಾಜ್ ಬಿ ಶೆಟ್ಟಿ ಇನ್ ಸ್ಟಾಗ್ರಾಂ, ಫೇಸ್ ಬುಕ್ ನಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಸಿನಿಮಾ ಸಂಬಂಧಿಸಿದಂತೆ, ತಮ್ಮ ಮೆಚ್ಚಿನ ನಾಯಿಗಳ ಬಗ್ಗೆ ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅಭಿಮಾನಿಗಳೊಂದಿಗೆ ಸಂವಾದ ನಡೆಸಲೂ ಬಳಸುತ್ತಾರೆ.
ಆದರೆ ಇದೀಗ ಏಕಾ ಏಕಿ ಕೆಲವು ದಿನಗಳ ಮಟ್ಟಿಗೆ ನಾನು ಸೋಷಿಯಲ್ ಮೀಡಿಯಾ ಬಳಸಲ್ಲ. ನನ್ನ ತಂಡ ಇದನ್ನು ನಿಭಾಯಿಸಲಿದೆ. ನನಗೆ ನನ್ನ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಹೀಗಾಗಿ ಕೆಲವು ದಿನಗಳ ಮಟ್ಟಿಗೆ ಸೋಷಿಯಲ್ ಮೀಡಿಯಾದಿಂದ ದೂರವುಳಿಯಲಿದ್ದೇನೆ ಎಂದಿದ್ದಾರೆ.
ರಾಜ್ ಬಿ ಶೆಟ್ಟಿ ಹೊಸ ಸಿನಿಮಾ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿಯೇ ಇದರ ಬಗ್ಗೆ ಗಮನ ಕೇಂದ್ರೀಕರಿಸಲು ಸೋಷಿಯಲ್ ಮೀಡಿಯಾದಿಂದ ದೂರುವುಳಿಯಲಿದ್ದಾರೆ ಎನ್ನಲಾಗಿದೆ.