ಲಾಕ್‌ಡೌನ್‌ನಿಂದಾಗಿ ಯುಎಇಯಲ್ಲಿ 4 ತಿಂಗಳು ಕಳೆದ ನಂತರ ಲಂಡನ್ ಗೆ ಹಾರಿರುವ ನಟಿ ಮೌನಿ ರಾಯ್ ಕುರಿತು ಹೊಸ ಸುದ್ದಿ ಹರಿದಾಡುತ್ತಿದೆ.
ಮೌನಿ ರಾಯ್ ಇತ್ತೀಚೆಗೆ ಲಂಡನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ನಾಗಿನ್ ಖ್ಯಾತಿಯ ಹುಡುಗಿ ತಮ್ಮ ವಜ್ರದ ಉಂಗುರವನ್ನು ಚಿತ್ರವೊಂದರಲ್ಲಿ ತೋರಿಸಿದ್ದಾರೆ.
ಇದು ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಮೌನಿ ರಾಯ್ ಗುಪ್ತವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಲಾರಂಭಿಸಿದೆ. ಇದಕ್ಕೆ ನಟಿಯೇ ಸ್ಪಷ್ಟನೆ ಕೊಡಬೇಕಿದೆ.