Publish Date: Sat, 15 Aug 2020 (19:55 IST)
Updated Date: Sat, 15 Aug 2020 (19:57 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ನ್ಯಾಯ ಕೋರುತ್ತಿರುವವರಲ್ಲಿ ಅವರ ಮಾಜಿ ಗೆಳತಿಯೂ ಒಬ್ಬರಾಗಿದ್ದಾರೆ.
ಸುಶಾಂತ್ ಸಿಂಗ್ ಅವರ ಮಾಜಿ ಗೆಳತಿ ಮತ್ತು ನಟಿ ಅಂಕಿತಾ ಲೋಖಂಡೆ ಅವರು ಕೆಲವು ವೈದ್ಯರು ಹೇಳಿಕೊಂಡಂತೆ ನಟ ಖಿನ್ನತೆಗೆ ಒಳಗಾಗಿರಬಹುದೆಂದು ನಂಬುತ್ತಿಲ್ಲ. ಈ ಕಾರಣಕ್ಕಾಗಿ ನಟನಿಗೆ ನ್ಯಾಯ ಕೋರುತ್ತಿದ್ದಾರೆ.
ಈ ನಡುವೆ ಅಂಕಿತಾ ಲೋಖಂಡೆಯ ಫ್ಲಾಟ್ ಹಣವನ್ನು ಸುಶಾಂತ್ ಕಟ್ಟುತ್ತಿದ್ದರು ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಉತ್ತರ ನೀಡಿದ ಅಂಕಿತಾ ಲೋಖಂಡೆ ತಾವು ಕಟ್ಟಿದ ಇಎಂಐನ ಬ್ಯಾಂಕ್ ಪಾಸ್ ಬುಕ್ ಫೋಟೋ ಹಾಕಿ ತಾವೇ ಹಣ ಸಂದಾಯ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದರು.
ಅಂಕಿತಾ ಲೋಖಂಡೆಯ ಪೋಸ್ಟ್ ನೋಡಿದ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ, ಅಂಕಿತಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಂಕಿತಾ ಅವರನ್ನು 'ಸ್ವತಂತ್ರ ಮಹಿಳೆ' ಎಂದು ಕರೆದಿದ್ದಾರೆ ಮತ್ತು ಅವರ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. "ನೀವು ಸ್ವತಂತ್ರ ಮಹಿಳೆ ಮತ್ತು ನನ್ನ ಹುಡುಗಿ ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ಶ್ವೇತಾ ಪ್ರತಿಕ್ರಿಯಿಸಿದ್ದಾರೆ.