Select Your Language

Notifications

webdunia
webdunia
webdunia
webdunia

ಎಂಗೇಜ್ಮೆಂಟ್ ಆಗಿದ್ದಕ್ಕೆ ಮನೆಯಲ್ಲೇ ಹೆಣವಾದ ಯುವತಿ

ಎಂಗೇಜ್ಮೆಂಟ್ ಆಗಿದ್ದಕ್ಕೆ ಮನೆಯಲ್ಲೇ ಹೆಣವಾದ ಯುವತಿ
ಹೈದ್ರಾಬಾದ್ , ಶನಿವಾರ, 22 ಫೆಬ್ರವರಿ 2020 (19:22 IST)

ನಾನು ಡಿಗ್ರಿ ಪೂರ್ಣ ಮಾಡಬೇಕು. ಆವಾಗ್ಲೇ ಮದುವೆ ಮಾಡಿ ಅಂತ ಯುವತಿ ಹೇಳಿದ ಮಾತನ್ನು ಪೋಷಕರು ಕೇಳಲೇ ಇಲ್ಲ. ಡಿಗ್ರಿ ಓದುತ್ತಿದ್ದ ಯುವತಿ ಇದೀಗ ಬಾರದ ಲೋಕಕ್ಕೆ ತೆರಳಿದ್ದಾಳೆ.
 

ಮದುವೆ ಇಷ್ಟವಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದ 19 ವರ್ಷದ ಯುವತಿ ಭಾರತಿ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಆಂಧ್ರದ ಶ್ರೀಕಾಕುಲಂನಲ್ಲಿ ಘಟನೆ ನಡೆದಿದ್ದು, ಮಗಳ ಮದುವೆಯನ್ನು ಆತುರವಾಗಿ ಮಾಡಿ ಮುಗಿಸಬೇಕೆಂದಿದ್ದ ಪೋಷಕರು ಇದೀಗ ಸಿಡಿಲು ಬಡಿದಂತೆ ಮಗಳನ್ನು ಕಳೆದುಕೊಂಡು ಕುಳಿತಿದ್ದಾರೆ.

ರಾಮಯ್ಯ – ಲಕ್ಷ್ಮೀ ದಂಪತಿಯ ಮಗಳಾದ ಭಾರತಿ ಪದವಿ ಪೂರ್ಣಗೊಳ್ಳೋವರೆಗೆ ಮದುವೆ ಬೇಡ ಅಂತ ಹೇಳಿದ್ದಾಳೆ. ಆದರೆ ಮಗಳ ಮಾತಿಗೆ ಬೆಲೆ ಕೊಡದೇ ಎಂಗೇಜ್ಮೆಂಟ್ ಮಾಡಿದ್ದರು. ಇದೀಗ ಭಾರತಿ ಸಾವಿಗೆ ಶರಣಾಗಿದ್ದಾಳೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಚೋದನಕಾರಿ ಭಾಷಣ : AIMIM ವಾರಿಸ್ ಪಠಾಣ್ ವಿರುದ್ಧ ಕೇಸ್