Publish Date: Sat, 22 Feb 2020 (19:05 IST)
Updated Date: Sat, 22 Feb 2020 (19:08 IST)
ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆದ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಮಹಾರಾಷ್ಟ್ರದ ಮಾಜಿ ಶಾಸಕನ ವಿರುದ್ಧ ಕೇಸ್ ದಾಖಲಾಗಿದೆ.
ಮಹಾರಾಷ್ಟ್ರದ ಮಾಜಿ ಶಾಸಕ ಹಾಗೂ ಎ.ಐ.ಎಂ.ಐ.ಎಂ ವಕ್ತಾರರಾಗಿರೋ ವಾರೀಸ್ ಪಠಾಣ್ ವಿರುದ್ಧ ಕೇಸ್ ದಾಖಲಾಗಿದೆ. ನೂರು ಕೋಟಿ ಜನರ ಮೇಲೆ ಪ್ರಾಬಲ್ಯ ಮೆರೆಯಲು 15 ಕೋಟಿ ಮುಸ್ಲಿಂ ರು ಸಾಕು ಅಂತ ಸಮಾವೇಶದಲ್ಲಿ ವಾರೀಸ್ ಪಠಾಣ್ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ರು.
ವಾರೀಸ್ ಹೇಳಿಕೆ ಕೋಮುಸಾಮರಸ್ಯಕ್ಕೆ ಧಕ್ಕೆ ತರೋ ಕೆಲಸವಾಗಿದ್ದರಿಂದ ಅವರ ವಿರುದ್ಧ ಕಲಬುರಗಿಯಲ್ಲಿ ಶ್ವೇತಾ ರಾಠೋಡ್ ಕೇಸ್ ದಾಖಲು ಮಾಡಿದ್ದಾರೆ.