Publish Date: Tue, 18 Feb 2020 (17:39 IST)
Updated Date: Tue, 18 Feb 2020 (17:40 IST)
ಬರೋಬ್ಬರಿ ಮೂರು ವರ್ಷಗಳ ಕಾಲ ಲವ್, ರೋಮ್ಯಾನ್ಸ್ ಮಾಡಿದ್ದ ಭೂಪನೊಬ್ಬ ಮದುವೆ ಎಂದಾಕ್ಷಣ ಹುಡುಗಿಗೆ ದೋಖಾ ಮಾಡಿದ್ದಾನೆ.
ಆರೋಪಿ ಉಡುಪಿ ಜಿಲ್ಲೆಯ ಶಿವರಾಜ್ ಪೂಜಾರಿ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಯುವತಿಯೊಬ್ಬಳನ್ನು ಪ್ರೀತಿ ಮಾಡಿ ನಂಬಿಸಿ ಮೂರು ವರ್ಷಗಳಿಂದ ಕಾಮತೃಷೆ ತೀರಿಸಿಕೊಂಡು ಇದೀಗ ಮದುವೆ ಬೇಡ ಅಂತಿರೋ ಭೂಪ ಕಂಬಿ ಎಣಿಸುತ್ತಿದ್ದಾನೆ.
ಪ್ರೀತಿಸಿ ಕೈ ಕೊಟ್ಟ ಕಾರಣಕ್ಕೆ ಯುವತಿ ಕೇಸ್ ದಾಖಲು ಮಾಡಿದ್ದು, ಆರೋಪಿಯ ಕುಟುಂಬದವರು ವಿರುದ್ಧವೂ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಹೊಸನಗರ ತಾಲೂಕಿನಲ್ಲಿ ಈ ಘಟನೆ ನಡೆದಿದೆ.