Select Your Language

Notifications

webdunia
webdunia
webdunia
webdunia

ಅವಳು ಗರ್ಭಿಣಿಯಾದರೆ ನಾನು ತಾಳಿ ಕಟ್ಟಬೇಕಾ?

ಕಪಲ್ ರೋಮ್ಯಾನ್ಸ್
ಬೆಂಗಳೂರು , ಮಂಗಳವಾರ, 18 ಫೆಬ್ರವರಿ 2020 (13:55 IST)
ಪ್ರಶ್ನೆ: ಸರ್. ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿರುವೆ. ಅವಳ ವಯಸ್ಸು 26 ಮತ್ತು ನನ್ನದು ವಯಸ್ಸು 27. ನಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿರುವಾಗಲೇ ಪ್ರೇಮಿಸೋಕೆ ಶುರುಮಾಡಿದ್ದೇವು.

ಈಗ ನನ್ನ ಸಮಸ್ಯೆ ಏನೆಂದರೆ ನಾನು ಅವಳನ್ನು ಗರ್ಭಿಣಿ ಮಾಡಿರುವೆ. ಸಮಯ ಸಿಕ್ಕಾಗಲೆಲ್ಲಾ ಅವಳ ಜೊತೆ ಲೈಂಗಿಕ ಕ್ರಿಯೆ ನಡೆಸಿರುವೆ. ಆದರೆ ಈಗ ಆಕೆಯನ್ನು ಕಂಡರೆ ಆಗುತ್ತಿಲ್ಲ. ಅವಳು ಮದುವೆ ಮಾಡಿಕೋ ಅಂತ ಬೆನ್ನು ಬಿದ್ದಿದ್ದಾಳೆ. ಮುಂದೇನು ಮಾಡಲಿ?  

ಉತ್ತರ: ಈ ಥರದ ಪ್ರಶ್ನೆಗಳಿಗೆ ಈ ಹಿಂದೆ ಇದೇ ಅಂಕಣದಲ್ಲಿ ಅನೇಕ ಬಾರಿ ಉತ್ತರ ಕೊಟ್ಟಿದ್ದೇವೆ. ನಿಮ್ಮದು ಅಸಲಿಗೆ ಸಮಸ್ಯೆಯೇ ಅಲ್ಲ. ಆಕರ್ಷಣೆ, ಮೋಸ ಮತ್ತು ಆತುರದಿಂದಾಗಿ ಹಾಗೆ ಆಗುತ್ತದೆ. ಹೀಗಾಗಿ ನಿಧಾನವಾಗಿ ಕುಳಿತುಕೊಂಡು ಮಾತನಾಡಿ.

ನಿಮ್ಮ ಪ್ರೇಯಸಿಯನ್ನು ಮದುವೆಯಾಗದೇ ನಿಮಗೆ ಬೇರೆ ದಾರಿ ಇಲ್ಲ. ಏಕೆಂದರೆ ನಿಮ್ಮಿಂದಾಗಿ ಅವಳು ಈಗ ಗರ್ಭಿಣಿಯಾಗಿದ್ದಾಳೆ. ಅವಳ ಜೊತೆ ಮಲಗೋದಕ್ಕಿಂತ ಮೊದಲೇ ನೀವು ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕಿತ್ತು. ಆಗೆಲ್ಲ ಮಜಾ ಮಾಡಿ ಈಗ ಮದುವೆ ಬೇಡ ಅಂದರೆ ನಿಮಗೆ ಸಮಸ್ಯೆಗಳು ತಪ್ಪಿದ್ದಲ್ಲ.



Share this Story:

Follow Webdunia kannada

ಮುಂದಿನ ಸುದ್ದಿ

ಕಾಂಡೋಮ್ ಬಳಸಿದರೂ ಮಗುವಾಗುತ್ತಾ?!