Select Your Language

Notifications

webdunia
webdunia
webdunia
webdunia

ಸಡಕ್ 2 ಟ್ರೈಲರ್ ಗೆ ಭಾರೀ ಹಿನ್ನಡೆ : ಕುನಾಲ್ ಖೇಮು ಹೇಳಿದ್ದೇನು?

ಸಡಕ್ 2 ಟ್ರೈಲರ್ ಗೆ ಭಾರೀ  ಹಿನ್ನಡೆ :  ಕುನಾಲ್ ಖೇಮು ಹೇಳಿದ್ದೇನು?
ಮುಂಬೈ , ಶನಿವಾರ, 15 ಆಗಸ್ಟ್ 2020 (22:32 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳ ಕೆಂಗಣ್ಣಿಗೆ ಸಡಕ್ 2 ಚಿತ್ರ ಗುರಿಯಾಗಿದೆ.

ನಟಿ ಆಲಿಯಾ ಭಟ್, ಸಂಜಯ ದತ್ ಮತ್ತಿತರರ ನಟನೆಯ ಚಿತ್ರದ ಟ್ರೈಲರ್ ಗೆ ಲೈಕ್ ಗಳಿಗಿಂತ ಡಿಸ್ ಲೈಕ್ ಗಳೇ ಹೆಚ್ಚಿಗೆ ಬರುತ್ತಿವೆ.

ಈ ನಡುವೆ ಮಹೇಶ್ ಭಟ್ ನಿರ್ದೇಶನದ ಚಿತ್ರಕ್ಕೆ ಯುಟ್ಯೂಬ್ ನಲ್ಲಿ ಇಷ್ಟಪಡದವರೇ ಹೆಚ್ಚಾಗುತ್ತಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನಟ ಕುನಾಲ್ ಖೇಮು, ಅಸಲಿ ವಿಷಯ ದಾರಿ ತಪ್ಪಿದೆ ಎಂದಿದ್ದಾರೆ.

ಇದಕ್ಕೆ ಉದಾಹರಣೆ ನೀಡಿರುವ ಖೇಮು, ರೈಲ್ವೆ ನಿಲ್ದಾಣದಲ್ಲಿ ಯಾರಾದರೂ ಬೇರೊಬ್ಬರನ್ನು ಹೊಡೆಯುವುದನ್ನು ನೀವು ನೋಡುತ್ತೀರಿ ಮತ್ತು ಅಲ್ಲಿದ್ದ ಜನಸಮೂಹವು ಒಟ್ಟುಗೂಡುತ್ತದೆ.  ಸುಳಿವು ಇಲ್ಲದೆ ಆ ವ್ಯಕ್ತಿಯನ್ನು ಹೊಡೆಯಲು ಪ್ರಾರಂಭಿಸುತ್ತದೆ. ನಂತರ ಅವರು ಯಾಕೆ ಹಾಗೆ ಮಾಡಿದರು ಎಂದು ಕೇಳುತ್ತಾರೆ. ಅವರು ಆ ವ್ಯಕ್ತಿಯನ್ನು ಏಕೆ ಹೊಡೆದರು ಎಂಬುದರ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಆದ್ದರಿಂದ, ಅರ್ಧದಷ್ಟು ಜನರು ಎಲ್ಲವನ್ನೂ ತಿಳಿದಿರುವುದಿಲ್ಲಎಂದಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಹೇಳಲು ಪ್ರತಿಯೊಬ್ಬರಿಗೂ ಹಕ್ಕಿದೆ ಎಂದು ಕುನಾಲ್ ಖೇಮು ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವದಾಖಲೆಗಾಗಿ 72 ಲಕ್ಷ ಕೊಟ್ಟು ನಕಲಿ ವೀಕ್ಷಕರನ್ನು ಸೃಷ್ಠಿಸಿ ಸಿಕ್ಕಿಬಿದ್ದ ಗಾಯಕ