ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಶಿವಸೇನೆ ನಾಯಕ ಸಂಜಯ್ ರಾವತ್ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ.
ಕಂಗನಾ ರಣಾವತ್ ಗೆ 'ಬಿಜೆಪಿ ಬೆಂಬಲ' ನೀಡಿದೆ ಎಂದು ಸಂಜಯ್ ರಾವತ್ ನೀಡಿರುವ ಹೇಳಿಕೆಗೆ ನಟಿ ಕಂಗನಾ ತಿರುಗೇಟು ನೀಡಿದ್ದಾರೆ.
ಬದಲಿಗೆ ಶಿವಸೇನೆ ಗೂಂಡಾಗಳ ವಿರುದ್ಧ ಹರಿಹಾಯ್ದಿದ್ದಾರೆ.
"ವಾಹ್ !! ಮಾದಕ ದ್ರವ್ಯ ಮತ್ತು ಮಾಫಿಯಾ ದಂಧೆ ನಡೆಸಿದ ವ್ಯಕ್ತಿಯನ್ನು ರಕ್ಷಿಸುತ್ತಿರುವುದು ದುರದೃಷ್ಟಕರ, ಶಿವಸೇನಾ ಗೂಂಡಾಗಳು ಬಹಿರಂಗವಾಗಿ ನನ್ನನ್ನು ಬಂಧಿಸಲು ಅವಕಾಶ ನೀಡಬೇಕು, ನಹೀನ್ ಸಂಜಯ್ ಜಿ? ಮಾಫಿಯಾ ವಿರುದ್ಧ ನಿಂತಿರುವ ಯುವತಿಯನ್ನು ಅವರು ಹೇಗೆ ರಕ್ಷಿಸುತ್ತಾರೆ !!! " ಎಂದು ನಟಿ ಕಂಗನಾ ವ್ಯಂಗ್ಯವಾಗಿ ಟ್ವಿಟ್ ಮಾಡಿದ್ದಾರೆ.