ಬೆಂಗಳೂರು: ಉದ್ಯಮಿ ರೋಷನ್ ಜತೆಗೆ ಈಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ನಿರೂಪಕಿ ಅನುಶ್ರೀಯ ಮದುವೆ ಸೀರೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು.
ಅನುಶ್ರೀ ಮದುವೆಗೆ ಬರೋಬ್ಬರಿ 2.5ಲಕ್ಷದ ಸೀರೆಯನ್ನು ಉಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿತ್ತು. ಇದೀಗ ಈ ಎಲ್ಲ ಊಹಾಪೋಹಕ್ಕೆ ನಿರೂಪಕಿಯೇ ಉತ್ತರ ನೀಡಿದ್ದಾರೆ.
ಈ ಸಂಬಂಧ ಅನುಶ್ರೀ ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಮ್ಮ ದಿಬ್ಬಣ ಸೀರೆಯ ಫೋಟೋವನ್ನು ಹಂಚಿ ಮಾಹಿತಿ ನೀಡಿದ್ದಾರೆ. ಈ ಸೀರೆ ಬರೋಬ್ಬರಿ 2.5 ಲಕ್ಷದ್ದು ಎಂದು ಹೇಳಲಾಗಿತ್ತು, ಆದರೆ ಇದು ಬರೀ 2,500ಸಾವಿರದ ಸಾರಿ ಎಂದು ತಮ್ಮ ಸೀರೆ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ.
ಪೋಸ್ಟ್‌ನಲ್ಲಿ ಆರಾಧಿಸಿದ ದೇವರು, ಆಶೀರ್ವಾದ ಮಾಡಿದ ಪ್ರೀತಿಯ ಕನ್ನಡಿಗರು ಕೊಟ್ಟ ವರ, ಈ ಕ್ಷಣ, ಈ ನಗು ಎಂದು ಬರೆದು ಎಲ್ಲ ಪೋಸ್ಟ್‌ನಲ್ಲೂ ನನ್ನ ಸೀರೆ ₹2.5ಲಕ್ಷದ್ದು ಎಂದು, ಆದರೆ ಅದು ಎಂಎಸ್‌ಯು ಬರೀ ₹2,700 ಸೀರೆ ಎಂದು ಮಾಹಿತಿ ನೀಡಿದ್ದಾರೆ.
ಈ ಫೋಸ್ಟ್‌ಗೆ ಭಾರೀ ಕಮೆಂಟ್ ಬಂದಿದ್ದು, ಸಾರಿ ಅಮೌಂಟ್ ಹೇಳಿ ಒಳ್ಳೆಯ ಕೆಲಸ ಮಾಡಿದ್ದೀರಿ, ಎಲ್ಲಿ ನೋಡಿದ್ರು 3ಲಕ್ಷದ್ದು ಸಾರಿ ಎಂದು ಹೇಳಲಾಗಿತ್ತು. ನಿಮ್ಮ ನೇರ ನಿಖರ ಮಾಹಿತಿ ಎಲ್ಲರೂ ಇಷ್ಟ ಪಡುವುದು ಅಕ್ಕ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ನಿಮ್ಮ ಪ್ರಾಮಾಣಿಕತೆ ನೆಕ್ಸ್ಟ್ ಲೆವೆಲ್ ಅಕ್ಕಾ, ಯಾವತ್ತಿಗೂ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.