ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿಟ್ ಸಿನಿಮಾ ದಿ ವಿಲನ್ ಚಿತ್ರದ ನಟಿ, ಬ್ರಿಟನ್ ಮೂಲದ ಆ್ಯಮಿ ಜಾಕ್ಸನ್ ಅವರು ಗಂಡು ಮಗುವಿಗೆ ತಾಯಿಯಾದ ಸಂಭ್ರಮದಲ್ಲಿದ್ದಾರೆ.
ಈ ಗುಡ್ ನ್ಯೂಸ್ ಅನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ. ಜಗತ್ತಿಗೆ ಸ್ವಾಗತ, ಆಸ್ಕರ್ ಅಲೆಕ್ಸಾಂಡರ್ ವೆಸ್ಟ್‌ವಿಕ್ ಎಂದು ಇನ್‌ಸ್ಟಾಗ್ರಾಂನಲ್ಲಿ ಮುದ್ದಾದ ಮಗುವಿನ ಚಿತ್ರದೊಂದಿಗೆ ಪೋಸ್ಟ್ ಮಾಡಿದ್ದಾರೆ.
ಕನ್ನಡ ಸೇರಿದಂತೆ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಹಲವು ಚಿತ್ರಗಳಿಗೆ ಬಣ್ಣ ಹೆಚ್ಚಿದ್ದ ಆ್ಯಮಿ ಅವರು ಕಳೆದ ವರ್ಷ ಜನವರಿಯಲ್ಲಿ ಹಾಲಿವುಡ್ ನಟ ಎಡ್ ವೆಸ್ಟ್‌ವಿಕ್ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಕಳೆದ ಆಗಸ್ಟ್ 24ರಂದು ಇಟಲಿಯಲ್ಲಿ ಅದ್ಧೂರಿ ಕಾರ್ಯಕ್ರಮದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಆ್ಯಮಿ ಜಾಕ್ಸನ್ ಮತ್ತು ಅವರ ಮಾಜಿ ಪ್ರಿಯಕರ ಜಾರ್ಜ್ ಪನಾಯಿಟೊ ಅವರಿಗೆ 6 ವರ್ಷದ ಪುತ್ರ ಇದ್ದಾನೆ.