ಬೆಂಗಳೂರು: ಕಾಳಿದಾಸ ಕನ್ನಡ ಮೇಸ್ಟ್ರು, ಶಿವಾಜಿ ಸುರತ್ಕಲ್, ಶುಭಮಂಗಳ, ಛೂ ಮಂತರ್ ಹೀಗೇ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದ ಕನ್ನಡದ ಖ್ಯಾತ ನಟಿ ಮೇಘಾನ ಗವ್ಕಾಂರ್ ಅವರು ಇದೀಗ ತಮ್ಮ ಅಭಿಮಾನಿಗಳ ಬಳಿಯೊಂದು ಗುಡ್‌ನ್ಯೂಸ್ ಹಂಚಿಕೊಂಡಿದ್ದಾರೆ.
ಅದೇನೆಂದರೆ ನಟಿ ಡಾಕ್ಟರೇಟ್ ಪದವಿಯನ್ನು ಪಡೆದಿರುವ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿ ಹೇಳಿಕೊಂಡಿದ್ದಾರೆ. ಪದವಿಯನ್ನು ಪಡೆಯುವ ಮೂಲಕ ನನ್ನ ತಂದೆಯ ಕನಸ್ಸನ್ನು ಈಡೇರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಕಳೆದ 6 ವರ್ಷದಿಂದ ನಾನು ಪಿಎಚ್‌ಡಿಗಾಗಿ ಅಧ್ಯಯನ ಮಾಡಿದ್ದೆ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಾನು ಯಶಸ್ವಿಯಾಗಿ ನನ್ನ ಥಿಸೀಸ್‌ನ್ನು ಸಲ್ಲಿಸಿದೆ. ಕಳೆದ ವಾರ ವೈವಾ ಕೂಡಾ ನಡೆಯಿತು. ಇವತ್ತು ನಾನು ಖುಷಿಯಲ್ಲಿ ಹೇಳುತ್ತಿದ್ದೇನೆ ನಾನು ಪದವಿಯನ್ನು ಸ್ವೀಕರಿಸಿದ್ದೇನೆಂದು.
ಇದು ನನಗೆ ತುಂಬಾ ಸ್ಪೆಷಲ್ ಯಾಕೆಂದರೆ. ಈ ಜರ್ನಿ ನನಗೆ ಸುಲಭವಾಗಿರಲಿಲ್ಲ. ಈ ಪದವಿ ಪುರಸ್ಕಾರವನ್ನು ನನ್ನ ತಂದೆಗೆ ಅರ್ಪಿಸುತ್ತೇನೆ. ಅವರ ಕನಸ್ಸಿನಂತೆ ಇದನ್ನು ಮಾಡಿದೆ. ನನ್ನ ವಿಷಯ ಬಂದು ಸಿನಿಮಾ ಮತ್ತು ಲಿಟರೇಚರ್ ಎಂದರು. ಅಭಿಮಾನಿಗಳು, ಕುಟುಂಬದವರು ಎಲ್ಲರೂ ನನಗೆ ಬೆಂಬಲ ಸೂಚಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು ಎಂದರು.