ಮುಂಬೈ: ಸಿಕಂದರ್ ಸಿನಿಮಾ ಮೂಲಕ ಮೊದಲ ಬಾರಿ ಜೋಡಿಯಾಗಿ ತೆರೆ ಹಂಚಿಕೊಂಡಿರುವ ನಟ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ವಯಸ್ಸಿನ ಅಂತರದ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಇದೀಗ ಈ ವಿಚಾರವಾಗಿ ನಟ ಸಲ್ಮಾನ್ ಖಾನ್ ಹಾಸ್ಯಸ್ಪದವಾಗಿ ಪ್ರತಿಕ್ರಿಯಿಸಿದ್ದಾರೆ.
ಮಾರ್ಚ್ 23 ರಂದು ಮುಂಬೈನಲ್ಲಿ ನಡೆದ ಸಿಕಂದರ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿನಿಮಾದಲ್ಲಿನ ವಯಸ್ಸಿನ ಅಂತರದ ಬಗ್ಗೆ ನಾಯಕಿಗೆ ಸಮಸ್ಯೆಯಿಲ್ಲ, ಅದಲ್ಲದೆ ಈ ವಿಚಾರ ಆಕೆಯ ತಂದೆಗೂ ಸಮಸ್ಯೆಯಿಲ್ಲ. ಹಾಗೀದ್ಮೇಲೆ ನೀವು ಯಾಕೆ ಮಾತನಾಡಬೇಕು ಎಂದು ನಗುತ್ತನೇ ಸಲ್ಮಾನ್ ನೆಟ್ಟಿಗರ ಬಾಯಿ ಮುಚ್ಚಿಸಿದ್ದಾರೆ.
ಈ ವೇಳೆ ಪಕ್ಕದಲ್ಲೇ ನಿಂತಿದ್ದ ನಟಿ ರಶ್ಮಿಕಾ, ಸಲ್ಮಾನ್ ಖಾನ್ ಪ್ರತಿಕ್ರಿಯೆ ಕೇಳಿ ನಕ್ಕಿದ್ದಾರೆ.
ತೆಲುಗಿನಲ್ಲಿ ಪುಪ್ಪಾ, ಬಾಲಿವುಡ್‌ನಲ್ಲಿ ಅನಿಮಲ್ ಮತ್ತು ಛವಾ ಸಾಲು ಸಾಲು ಹಿಟ್ ಸಿನಿಮಾಗಳ ಯಶಸ್ವಿನ ಬೆನ್ನಲ್ಲೇ ಇದೀಗ ಸಿಕಂದರ್ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ ಮತ್ತೇ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.