ಬೆಂಗಳೂರು: ಮಗಳು ಜಾನಕಿ ಧಾರವಾಹಿ ಖ್ಯಾತಿಯ ನಟ ಯಲಹಂಕ ಬಾಲಾಜಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ.
ಈ ವಿಚಾರವನ್ನು ಹಂಚಿಕೊಂಡಿರುವ ನಿರ್ದೇಶಕ ಟಿಎನ್ ಸೀತಾರಾಮ್ ತಮ್ಮ ಸ್ನೇಹಿತನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಬಾಲಾಜಿ ಸೀತಾರಾಮ್ ನಿರ್ದೇಶನದ ಬಹುತೇಕ ಧಾರವಾಹಿಗಳಲ್ಲಿ ಪಾತ್ರ ಮಾಡಿದ್ದರು.
ಅತ್ಯಂತ ಹೃದಯವಂತ ಗೆಳೆಯ. ನನ್ನೆಲ್ಲಾ ಕಷ್ಟ-ಸುಖಗಳಲ್ಲಿ ಜೊತೆಯಾಗಿದ್ದ, ಬದುಕಿನಲ್ಲಿ ಅನೇಕ ಕಷ್ಟಗಳನ್ನು ಕಂಡ ಗೆಳೆಯಿ ಇನ್ನಿಲ್ಲ ಎನ್ನಲು ತೀವ್ರ ಸಂಕಟವಾಗುತ್ತದೆ ಎಂದು ಸೀತಾರಾಮ್ ಫೇಸ್ ಬುಕ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.