ಹೈದರಾಬಾದ್ : ಟಾಲಿವುಡ್ ನಟ ವಿಜಯ್ ದೇವರಕೊಂಡ ಹೆಸರಿನಲ್ಲಿ ನಕಲಿ ನಿರ್ಮಾಣ ಸಂಸ್ಥೆಗಳು ಅಡ್ಮಿಷನ್ ನಡೆಸಿ ಯುವತಿಯರಿಗೆ ವಂಚಿಸುತ್ತಿದೆ ಎಂಬುದಾಗಿ ತಿಳಿದುಬಂದಿದೆ.
									
										
								
																	
ಕೆಲವು ನಕಲಿ ನಿರ್ಮಾಣ ಸಂಸ್ಥೆಗಳು, ವಿಜಯ ದೇವರಕೊಂಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವವರು ಬೇಕಾಗಿದ್ದಾರೆ. ಆಸಕ್ತಿ ಇರುವವರು ಆಡಿಷನ್ ಗೆ ಬರಬಹುದು ಎಂದು ಜಾಹೀರಾತು ನೀಡಿದ್ದರು. ಇದು ನಟನ ಗಮನಕ್ಕೆ ಬಂದಿದೆ ಎನ್ನಲಾಗಿದೆ.
									
			
			 
 			
 
 			
			                     
							
							
			        							
								
																	ಈ ಬಗ್ಗೆ ವಾರ್ನಿಂಗ್ ನೀಡಿದ ನಟ ವಿಜಯ ದೇವರಕೊಂಡ ತಂಡ, ವಿಜಯ್ ದೇವರಕೊಂಡ ಸಿನಿಮಾಗಳು ಅಧಿಕೃತವಾಗಿ ಅನೌನ್ಸ್ ಆಗುತ್ತೆ. ಬೇರೆ ಯಾವುದನ್ನು ನಂಬಬೇಡಿ. ಯಾವುದೇ ಆಡಿಷನ್ ತೆಗೆದುಕೊಳ್ಳುವ ಮೊದಲು ಜಾಗರೂಕರಾಗಿರಬೇಕು ಎಂದಿದ್ದಾರೆ. ಹಾಗೇ ವಂಚನೆ ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.