Publish Date: Wed, 16 Sep 2020 (11:24 IST)
Updated Date: Wed, 16 Sep 2020 (11:26 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್ ದಂಪತಿ ದಿಗಂತ್-ಐಂದ್ರಿತಾ ಸಿಸಿಬಿ ಕಚೇರಿಗೆ ವಿಚಾರಣೆಗಾಗಿ ಆಗಮಿಸಿದ್ದಾರೆ.
ನಿನ್ನೆಯೇ ಸಿಸಿಬಿ ಇಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಅದರಂತೆ ಇಂದು ದಿಗ್ಗಿ-ಆಂಡಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬಂದಿದ್ದಾರೆ. ತಕ್ಷಣವೇ ಸಿಸಿಬಿ ಅಧಿಕಾರಿಗಳು ಅವರನ್ನು ಪ್ರತ್ಯೇಕ ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಮೊದಲು ಐಂದ್ರಿತಾರನ್ನು ವಿಚಾರಣೆಗೊಳಪಡಿಸಲಿರುವ ಅಧಿಕಾರಿಗಳು ಬಳಿಕ ಪ್ರತ್ಯೇಕವಾಗಿ ದಿಗಂತ್ ರನ್ನು ವಿಚಾರಣೆಗೊಳಪಡಿಸಲಿದ್ದಾರೆ. ಇದಾದ ಬಳಿಕ ಇಬ್ಬರನ್ನೂ ಜತೆಯಾಗಿ ಕೂರಿಸಿ ವಿಚಾರಣೆ ನಡೆಸಲಿದ್ದಾರೆ. ಹೇಳಿಕೆಗಳಲ್ಲಿ ಸ್ವಲ್ಪವೇ ವ್ಯತ್ಯಾಸವಾದರೂ ದಂಪತಿ ಸಿಕ್ಕಿ ಹಾಕಿಕೊಳ್ಳೋದು ಪಕ್ಕಾ.