Publish Date: Sat, 22 Aug 2020 (22:24 IST)
Updated Date: Sat, 22 Aug 2020 (22:28 IST)
ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶದ ಕ್ಯಾನ್ಸರ್ ನಿಂದ ಗುಣಮುಖರಾಗಲು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಈ ನಡುವೆ ನಟ ಸಂಜಯ್ ದತ್ ಅವರ ಕುಚುಕು ಗೆಳೆಯ ಜಾಕಿ ಶ್ರಾಫ್ ಅವರು ಸಂಜಯ್ ದತ್ ಬಗ್ಗೆ ಮಾತನಾಡಿದ್ದಾರೆ.
"ನಾನು ಸಂಜಯ್ ದತ್ ಗೆ ಟೆಕ್ಸ್ಟ್ ಸಂದೇಶವನ್ನು ಕಳುಹಿಸಿದೆ. ಸಂಜು ಬಾಬಾ ಫೀನಿಕ್ಸ್‌ನಂತಿದ್ದಾನೆ. ಅವನು ತನ್ನ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ ಮತ್ತು ಅವನು ಕೂಡ ಈ ಮೂಲಕ ಎದ್ದು ಬಂದು ಮತ್ತಷ್ಟು ಹೊಳೆಯುತ್ತಾನೆ ಅನ್ನೋ ಖಾತ್ರಿ ನನಗಿದೆ" ಎಂದಿದ್ದಾರೆ.
ಸಂಜಯ್ ದತ್ ಮತ್ತು ಜಾಕಿ ಶ್ರಾಫ್ ಅವರು ಮಿಷನ್ ಕಾಶ್ಮೀರ, ಕಾರ್ಟೂಸ್, ಏಕಲವ್ಯ ಮತ್ತು ಕಳ್ನಾಯಕ್ ನಂತಹ ಸಾಕಷ್ಟು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.