Select Your Language

Notifications

webdunia
webdunia
webdunia
webdunia

ಕ್ಯಾನ್ಸರ್ ನಿಂದ ಬಳಲುತ್ತಿರುವ ಸಂಜಯ್ ದತ್ ಗೆ ನಟ ಚಿಜೀವಿ ಹೇಳಿದ್ದೇನು ಗೊತ್ತಾ?

ಕ್ಯಾನ್ಸರ್ ನಿಂದ ಬಳಲುತ್ತಿರುವ ಸಂಜಯ್ ದತ್ ಗೆ ನಟ ಚಿಜೀವಿ ಹೇಳಿದ್ದೇನು ಗೊತ್ತಾ?
ಹೈದರಾಬಾದ್ , ಶುಕ್ರವಾರ, 14 ಆಗಸ್ಟ್ 2020 (10:05 IST)
ಹೈದರಾಬಾದ್ : ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ವಿಚಾರ ತಿಳಿದ ಸಿನಿಮಾ ರಂಗವೇ ಬೇಸರಗೊಂಡಿದೆ.

ಇದೀಗ ದಕ್ಷಿಣ ಭಾರತದ ಖ್ಯಾತ ನಟ ಚಿರಂಜೀವಿಯವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುತ್ತಿರುವ ನಟನಿಗೆ ಶುಭ ಹಾರೈಸಿ, ಧೈರ್ಯ ತುಂಬಿದ್ದಾರೆ.

ಟ್ವಿಟರ್ ನಲ್ಲಿ ಸಂಜಯ್ ದತ್ ಜೊತೆಗಿನ ಫೋಟೊವೊಂದನ್ನು ಪೋಸ್ಟ್ ಮಾಡಿ ಟ್ವೀಟ್ ಮಾಡಿರುವ ಚಿರಂಜೀವಿಯವರು, ಸಂಜಯ್ ದತ್ ಭಾಯ್, ನೀವು ಅನಾರೋಗ್ಯ ಪರಿಸ್ಥಿತಿಯಲ್ಲಿದ್ದೀರಿ ಎಂದು ತಿಳಿದು ಬಹಳ ನೋವಾಗಿದೆ. ಆದರೆ ನೀವೊಬ್ಬ ಹೋರಾಟಗಾರರಾಗಿದ್ದೀರಾ, ಬಹಳ ವರ್ಷಗಳಿಂದಲೂ ಅನೇಕ ಸಂಕಷ್ಟಗಳನ್ನು ಎದುರಿಸುತ್ತಾ ಬಂದಿದ್ದೀರಿ. ಆದಕಾರಣ ನೀವು ಇದರಿಂದ ಬೇಗ ಹೊರಬರುತ್ತೀರಿ ಎಂಬ ನಂಬಿಕೆ ಇದೆ. ಆದಷ್ಟು ಬೇಗ ಗುಣಮುಖರಾಗಿ ಎಂದು ಪ್ರೀತಿಯಿಂದ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಚ್ಚಾಡುತ್ತಿದ್ದ ಅಭಿಮಾನಿಗಳನ್ನು ಒಂದು ಮಾಡಲು ವಾಹಿನಿಯೇ ಮಾಡಿದೆ ತಂತ್ರ