Publish Date: Sat, 17 Aug 2019 (10:12 IST)
Updated Date: Sat, 17 Aug 2019 (10:16 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಂಪನಿ ಎಂಬ ಕಾಮಿಡಿ ಶೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮಾಡುತ್ತಿರುವ ಟೀಕೆಗಳಿಗೆ ನಟ ಜೆಕೆ ತಕ್ಕ ಉತ್ತರ ಕೊಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ನಿವೇದಿತಾ ಗೌಡರನ್ನು ಜಡ್ಜ್ ಸ್ಥಾನದಲ್ಲಿ ಕೂರಿಸಿದ್ದು, ಜೆಕೆ ಮತ್ತು ಕೃಷಿ ತಾಪಂಡ ಅವರ ವರ್ತನೆ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಕೆಲವರು ಹಿಗ್ಗಾ ಮುಗ್ಗಾ ಟೀಕೆ ಮಾಡಿದ್ದರು. ಇವರಿಗೆ ಅಲ್ಲಿಯೇ ಜೆಕೆ ತಕ್ಕ ಉತ್ತರ ಕೊಟ್ಟಿದ್ದಾರೆ.
ನಿವೇದಿತಾರಂತಹ ಅನುಭವವಿಲ್ಲದವರನ್ನು ಜಡ್ಜ್ ಸ್ಥಾನದಲ್ಲಿ ಕೂರಿಸುವ ಬದಲು ಕನ್ನಡದಲ್ಲಿ ಎಷ್ಟೋ ಅನುಭವಿ ಹಾಸ್ಯ ಕಲಾವಿದರಿದ್ದರು. ಅವರನ್ನು ಕೂರಿಸಬಹುದಿತ್ತು ಎಂದು ಅಭಿಮಾನಿಯೊಬ್ಬರು ಹೇಳಿದ್ದಕ್ಕೆ ಇಲ್ಲಿ ಯಾರೂ ಜಡ್ಜ್ ಗಳಿಲ್ಲ ಎಂದಿದ್ದಾರೆ.
ಈ ರೀತಿ ಸ್ಪಷ್ಟನೆ ಕೊಟ್ಟ ಮೇಲೂ ಇನ್ನೊಬ್ಬರು ನಿವೇದಿತಾ ಅಕುಲ್ ಜತೆ ನಿರೂಪಕಿ ಆಗಬೇಕಿತ್ತು.ಜಡ್ಜ್ ಥರಾ ಅಕುಲ್ ಗೆ ಟೀಚರ್ ರೀತಿ ಇರೋದು ಸರಿಯಲ್ಲ ಎಂದಿದ್ದಾರೆ. ಇದಕ್ಕೆ ಖಡಕ್ ಆಗಿ ಉತ್ತರಿಸಿರುವ ಜೆಕೆ ಒಂದು ಕೆಲಸ ಮಾಡಿ ನೀವೇ ಚಾನೆಲ್ ನ ಪರ್ಚೇಸ್ ಮಾಡಿ. ಯಾರನ್ನು ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿ ಎಂದು ತಿರುಗೇಟು ಕೊಟ್ಟಿದ್ದಾರೆ. ಕಾಮಿಡಿ ಕಂಪನಿ ಶೋ ಆರಂಭವಾದಾಗಿನಿಂದ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಲೇ ಇದೆ.