ನಟ ಕೋಮಲ್ ಮೇಲೆ ಹಲ್ಲೆ ಮಾಡಿದ್ದು ಸುದೀಪ್ ಅಭಿಮಾನಿ ಎಂದವರ ಬೆವರಿಳಿಸಿದ ಅಣ್ಣ ಜಗ್ಗೇಶ್

ಬುಧವಾರ, 14 ಆಗಸ್ಟ್ 2019 (10:31 IST)
ಬೆಂಗಳೂರು: ಮಗಳನ್ನು ಟ್ಯೂಷನ್ ಗೆ ಬಿಟ್ಟು ಬರುತ್ತಿದ್ದ ವೇಳೆ ನಟ ಕೋಮಲ್ ಮೇಲೆ ಕ್ಷುಲ್ಲುಕ ಕಾರಣಕ್ಕೆ ಜಗಳವಾಡಿ ಹಲ್ಲೆ ನಡೆಸಿದ ಯುವಕ ಕಿಚ್ಚ ಸುದೀಪ್ ಅಭಿಮಾನಿ ಎಂದು ಯಾರೋ ಸುದ್ದಿ ಹಬ್ಬಿಸಿದ್ದಕ್ಕೆ ಅಣ್ಣ, ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮಗಳನ್ನು ಟ್ಯೂಷನ್ ಗೆ ಬಿಟ್ಟು ಕಾರಿನಲ್ಲಿ ಮರಳುತ್ತಿದ್ದಾಗ ಶ್ರೀರಾಮಪುರ ರೈಲ್ವೇ ಅಂಡರ್ ಪಾಸ್ ಬಳಿ ಬೈಕ್ ನಲ್ಲಿ ಪ್ರೇಯಸಿ ಜತೆಗೆ ಬರುತ್ತಿದ್ದ ವ್ಯಕ್ತಿ ಕಾರು ಅಡ್ಡಗಟ್ಟಿ ಅವಾಚ್ಯ ಶಬ್ಧದಲ್ಲಿ ನಿಂದಿಸಿದ್ದ. ಈ ವೇಳೆ ಕಾರು ನಿಧಾನವಾಗಿ ಚಲಾಯಿಸುತ್ತಿದ್ದರು ಸೈಡು ಕೊಟ್ಟಿಲ್ಲ ಎಂದು ಯುವಕನ ಆರೋಪವಾಗಿತ್ತು. ಈ ವೇಳೆ ಮಾತಿನ ಚಕಮಕಿ ನಡೆದು ಬೈಕ್ ನಲ್ಲಿದ್ದ ವ್ಯಕ್ತಿ ಕೋಮಲ್ ಮೇಲೆ ಹಲ್ಲೆ ನಡೆಸಿದ್ದಾನೆ. ಆದರೆ ತಕ್ಷಣವೇ ಸ್ಥಳೀಯರು ಹಾಗೂ ಅಲ್ಲೇ ಇದ್ದ ಸಂಚಾರಿ ಪೊಲೀಸರು ಜಗಳ ಬಿಡಿಸಿ ಠಾಣೆಗೆ ಕರೆದೊಯ್ದಿದ್ದಾರೆ.

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಜಗ್ಗೇಶ್ ಕೋಮಲ್ ಮೃದು ಸ್ವಭಾವದವನು. ಆತನ ಮೇಲೆ ವಿನಾಕಾರಣ ದಾದಾಗಿರಿ ಮಾಡಿದವರನ್ನು ಸುಮ್ನೇ ಬಿಡಲ್ಲ ಎಂದು ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದರ ಮಧ್ಯೆ ಹಲ್ಲೆ ನಡೆಸಿದವರು ಕಿಚ್ಚ ಸುದೀಪ್ ಅಭಿಮಾನಿಗಳು ಎಂದು ವಿನಾಕಾರಣ ಈ ಪ್ರಕರಣದಲ್ಲಿ ಸುದೀಪ್ ಹೆಸರು ಎಳೆದುತರುತ್ತಿರುವವರ ವಿರುದ್ಧ ಟ್ವಿಟರ್ ನಲ್ಲಿ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಭಿಮಾನಿಗಳಿಗೆ ಬೇಸರದ ಸಂಗತಿ ಹೇಳಿದ ಕಿಚ್ಚ ಸುದೀಪ್