ಅಭಿಮಾನಿಗಳಿಗೆ ಬೇಸರದ ಸಂಗತಿ ಹೇಳಿದ ಕಿಚ್ಚ ಸುದೀಪ್

ಬುಧವಾರ, 14 ಆಗಸ್ಟ್ 2019 (09:25 IST)
ಬೆಂಗಳೂರು: ಪೈಲ್ವಾನ್ ಸಿನಿಮಾ ಅಡಿಯೋ ಲಾಂಚ್ ಎಲ್ಲಾ ಸರಿ ಹೋಗಿದ್ದಿದ್ದರೆ ಕಳೆದ ವಾರ ಚಿತ್ರದುರ್ಗದಲ್ಲಿ ನಡೆಯಬೇಕಿತ್ತು. ಆದರೆ ಉತ್ತರ ಕರ್ನಾಟಕದ ಪ್ರವಾಹದಿಂದಾಗಿ ಅಡಿಯೋ ರಿಲೀಸ್ ಮುಂದೂಡಲಾಯಿತು.


ಆದರೆ ಇದೀಗ ಪೈಲ್ವಾನ್ ಸಿನಿಮಾ ಅಡಿಯೋ ರಿಲೀಸ್ ಚಿತ್ರದುರ್ಗದಲ್ಲಿ ನಡೆಯುತ್ತಿಲ್ಲ ಎಂದು ಕಿಚ್ಚ ಸುದೀಪ್ ಬೇಸರದ ಸಂಗತಿಯೊಂದನ್ನು ಹೊರಹಾಕಿದ್ದಾರೆ. ಪ್ರವಾಹ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಚಿತ್ರದುರ್ಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿಲ್ಲ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

‘ಪ್ರವಾಹ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಚಿತ್ರದುರ್ಗದಲ್ಲಿ ಅಡಿಯೋ ಲಾಂಚ್ ಮಾಡುತ್ತಿಲ್ಲ. ಅದರ ಬದಲು ಬೆಂಗಳೂರಿನಲ್ಲಿ ಮಾಡುತ್ತಿದ್ದೇವೆ. ಚಿತ್ರದುರ್ಗದ ಸ್ನೇಹಿತರಂತೇ ನನಗೂ ಇದು ತುಂಬಾ ನೋವುಂಟುಮಾಡಿದೆ. ಆದರೆ ನನ್ನ ಮುಂದಿನ ಸಿನಿಮಾದ ಅಡಿಯೋ ರಿಲೀಸ್ ಖಂಡಿತಾ ಅಲ್ಲಿಯೇ ಮಾಡುತ್ತೇವೆ. ಆದರೆ ಈಗ ನನ್ನ ಮಾತನ್ನು ನೀವು ಗೌರವಿಸುತ್ತೀರಿ ಮತ್ತು ಅರ್ಥಮಾಡಿಕೊಳ್ಳುತ್ತೀರಿ ಎಂದುಕೊಳ್ಳುತ್ತೇನೆ’ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟ್ವಿಟರ್ ನಲ್ಲಿ ಸ್ಪೋಟವಾಯಿತು ದರ್ಶನ್-ವಿಜಯಲಕ್ಷ್ಮಿ ನಡುವಿನ ಗುದ್ದಾಟ