Select Your Language

Notifications

webdunia
webdunia
webdunia
webdunia

ದರ್ಶನ್ ಗೆ ತಾಕತ್ತಿನ ಸವಾಲು ಹಾಕಿದ ಉಮಾಪತಿ

Darshan-Umapathy

Krishnaveni K

ಬೆಂಗಳೂರು , ಮಂಗಳವಾರ, 20 ಫೆಬ್ರವರಿ 2024 (20:24 IST)
ಬೆಂಗಳೂರು: ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಗೌಡ ನಡುವಿನ ವಾಗ್ಬಾಣ ಜೋರಾಗಿ ನಡೆಯುತ್ತಿದೆ. ಕಾಟೇರ ಸಿನಿಮಾ ಸಕ್ಸಸ್ ಮೀಟ್ ನಲ್ಲಿ ದರ್ಶನ್ ಟೈಟಲ್ ವಿಚಾರದಲ್ಲಿ ಉಮಾಪತಿಗೆ ಗುಮ್ಮಿದ್ದರು. ಇದಕ್ಕೀಗ ಉಮಾಪತಿ ತಿರುಗೇಟು ನೀಡಿದ್ದಾರೆ.

ಕಾಟೇರ ಸಿನಿಮಾ ಟೈಟಲ್ ನಾನು ಕೊಟ್ಟಿದ್ದೂಂತ ಹೇಳಿಕೊಂಡು ತಿರುಗಾಡ್ತಾ ಇದ್ದಾರೆ. ಅಯ್ಯೋ ತಗಡೇ ಕಾಟೇರ ಟೈಟಲ್ ಕೊಟ್ಟಿದ್ದು ನಾನು. ನಿನಗೆ ರಾಬರ್ಟ್ ಕತೆ ಕೊಟ್ಟಿದ್ದೇ ನಾನು. ನಾನು ಎಲ್ಲದಕ್ಕೂ ದಾಖಲೆ ಇಟ್ಕೊಂಡೇ ಮಾತನಾಡೋದು. ಕಾಟೇರ ನೀನೇ ಕೊಟ್ಟಿದ್ದೇ ಆದರೆ ನೀನೇ ಯಾಕೆ ಇಂಥಾ ಒಳ್ಳೆ ಕತೆ ಬಿಟ್ಟೆ? ನಿನ್ನ ಜಡ್ಜ್ ಮೆಂಟ್ ಅಷ್ಟು ಚೆನ್ನಾಗಿದೆ. ನೀನೇ ಸಿನಿಮಾ ಮಾಡಬಹುದಿತ್ತಲ್ಲ ಯಾಕಪ್ಪಾ ನಮ್ಮ ಹತ್ತಿರವೇ ಬಂದು ಗುಮ್ಮಿಸಿಕೊಳ್ತೀಯಾ’ ಎಂದು ತರುಣ್ ಸುಧೀರ್, ನಿರ್ದೇಶಕ ಮಹೇಶ್ ಕುಮಾರ್ ಅವರನ್ನು ವೇದಿಕೆಗೆ ಕರೆದು ಅವರ ಬಾಯಿಂದಲೂ ಹೇಳಿಸಿ ಉಮಾಪತಿಗೆ ಟಾಂಗ್ ಕೊಟ್ಟಿದ್ದರು.

ಈ ಘಟನೆ ಬಗ್ಗೆ ಉಮಾಪತಿ ಶ್ರೀನಿವಾಸ್ ಗೌಡ ಪ್ರತಿಕ್ರಿಯಿಸಿದ್ದು, ಗುಮ್ಮೋ ಟೈಮಲ್ಲಿ ಗುಮ್ಮಿದ್ದೀನಿ. ಇರಲಿ, ಈಗ ಅವರ ಹೊಟ್ಟೆ ತುಂಬಿದೆ ಮಾತನಾಡ್ತಾರೆ. ಮಾತನಾಡಲಿ ಬಿಡಿ. ಅಣ್ಣಾವ್ರು ನಿರ್ಮಾಪಕರನ್ನು ಅನ್ನದಾತರು ಎಂದಿದ್ದರು. ಆದರೆ ಇವರು ತಗಡು ಎಂದಿದ್ದಾರೆ. ಇದೇ ಪದ ಬಳಕೆಯಿಂದ ಹಿಂದೆ ಮಾಧ‍್ಯಮಗಳೂ ಬ್ಯಾನ್ ಮಾಡಿದ್ದು. ವೇದಿಕೆ ಸಿಕ್ಕಿದೆ ಅಂತ ಏನು ಬೇಕಾದರೂ ಮಾತನಾಡೋದಾ? ಏನು ಬೇಕಾದರೂ ಮಾಡಿ ಬಿಡ್ತೀರಾ? ತಾಕತ್ತಿದ್ದರೆ ಮಾಡಿ ನೋಡೋಣ’ ಎಂದು ಪ್ರತಿ ಸವಾಲು ಹಾಕಿದ್ದಾರೆ.

ಈ ಮೊದಲು ಉಪಾಧ‍್ಯಕ್ಷ ಸಿನಿಮಾ ಕಾರ್ಯಕ್ರಮದ ವೇದಿಕೆಯಲ್ಲಿ ಉಮಾಪತಿ ಗೌಡ ಕಾಟೇರ ಸಿನಿಮಾವನ್ನು ನಾವೇ ಬಿಟ್ಟುಕೊಟ್ಟಿದ್ದು ಎಂದಿದ್ದರು. ಅಂದಿನ ಮಾತಿಗೆ ಇದೀಗ ದರ್ಶನ್ ತಿರುಗೇಟು ಕೊಟ್ಟಿದ್ದಾರೆ. ಇದೀಗ ಒಂದು ಕಾಲದಲ್ಲಿ ಸ್ನೇಹಿತರಾಗಿದ್ದ ಇಬ್ಬರ ಜಟಾಪಟಿ ತಾರಕಕ್ಕೇರಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಚ್ಚ ವೆಂಕಟ್ ಹುಡುಕಿಕೊಡಿ ಎಂದು ಕಣ್ಣೀರು ಹಾಕಿದ ನಿರ್ದೇಶಕ