Publish Date: Wed, 09 Oct 2024 (10:02 IST)
Updated Date: Wed, 09 Oct 2024 (10:06 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಅರ್ಜಿ ಹಾಕಿರುವ ನಟ ದರ್ಶನ್ ಗೆ ಸರ್ಕಾರೀ ಅಭಿಯೋಜಕ ಪ್ರಸನ್ನಕುಮಾರ್ ಸವಾಲಾಗಿ ಪರಿಣಮಿಸಿದ್ದಾರೆ.
ದರ್ಶನ್ ಪರ ವಕೀಲ ಸಿವಿ ನಾಗೇಶ್ ಎತ್ತಿರುವ ಪ್ರಶ್ನೆಗಳಿಗೆ ಎಸ್ ಪಿಪಿ ಪ್ರಸನ್ನಕುಮಾರ್ ನಿನ್ನೆಯಿಂದ ಪ್ರತ್ಯುತ್ತರ ನೀಡುತ್ತಿದ್ದಾರೆ. ದರ್ಶನ್ ಈ ಪ್ರಕರಣದಲ್ಲಿ ಯಾವ ರೀತಿ ಭಾಗಿಯಾಗಿದ್ದರು ಹಾಗೂ ಪೊಲೀಸರು ನೀಡಿರುವ ಸಾಕ್ಷ್ಯಗಳು ಎಷ್ಟು ಪ್ರಬಲವಾಗಿದೆ ಎಂದು ಪ್ರಸನ್ನಕುಮಾರ್ ವಾದಿಸುತ್ತಿದ್ದಾರೆ.
ನಿನ್ನೆ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಅದರಂತೆ ಇಂದೂ ಪ್ರಸನ್ನಕುಮಾರ್ ವಾದ ಮಂಡನೆ ಮುಂದುವರಿಯಲಿದೆ. ಸಿವಿ ನಾಗೇಶ್ ಎತ್ತಿರುವ ಸವಾಲುಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿರುವ ಪ್ರಸನ್ನಕುಮಾರ್ ನಟ ದರ್ಶನ್ ಪಾಲಿಗೆ ಅಕ್ಷರಶಃ ಸವಾಲಾಗಿದ್ದಾರೆ. ಇದರಿಂದಾಗಿ ಅವರಿಗೆ ಜಾಮೀನು ಸಿಗುವುದು ಕಷ್ಟವಾಗುತ್ತಿದೆ.
ಇನ್ನೊಂದೆಡೆ ದರ್ಶನ್ ವಿರುದ್ಧ ಪೊಲೀಸರು ಸಂಗ್ರಹಿಸಿರುವ ಸಾಕ್ಷ್ಯ ಪ್ರಬಲವಾಗಿದ್ದು, ಇದು ಅವರನ್ನು ಸಂಕಷ್ಟಕ್ಕೆ ದೂಡಿದೆ. ದಸರಾ ವೇಳೆಗೆ ದರ್ಶನ್ ಬಿಡುಗಡೆಯಾಗಬಹುದು ಎಂದು ಕಾದಿದ್ದ ಫ್ಯಾನ್ಸ್ ಗೆ ನಿರಾಸೆಯಾಗಿದೆ. ಒಂದು ವೇಳೆ ಇಂದು ಪ್ರಸನ್ನಕುಮಾರ್ ವಾದ ಮಂಡನೆ ಮುಗಿದರೂ ತೀರ್ಪು ಇಂದೇ ಬರಬಹುದು ಎಂದು ಹೇಳಲಾಗದು.