Select Your Language

Notifications

webdunia
webdunia
webdunia
webdunia

ಇಂದು ಕೂಡಾ ಸಿಗದ ಬೇಲ್, ನ್ಯಾಯಾಧೀಶರ ಬಳಿ ದರ್ಶನ್ ಪರ ವಕೀಲರ ಮನವಿ ಹೀಗಿದೆ

ಇಂದು ಕೂಡಾ ಸಿಗದ ಬೇಲ್, ನ್ಯಾಯಾಧೀಶರ ಬಳಿ ದರ್ಶನ್ ಪರ ವಕೀಲರ ಮನವಿ ಹೀಗಿದೆ

Sampriya

ಬೆಂಗಳೂರು , ಶುಕ್ರವಾರ, 4 ಅಕ್ಟೋಬರ್ 2024 (17:34 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ನಟ ದರ್ಶನ್ ಹಾಗೂ ಡಿ ಬಾಸ್ ಫ್ಯಾನ್ಸ್‌ಗೆ ಭಾರೀ ನಿರಾಸೆಯಾಗಿದೆ.‌ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್​ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ದಿನದ ಅಂತ್ಯಕ್ಕೆ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮಧ್ಯಾಹ್ನ 12.30ಕ್ಕೆ ಮುಂದೂಡಿದೆ.

ಎ1 ಆರೋಪಿ ಪವಿತ್ರ ಗೌಡ ಜಾಮೀನು ಅರ್ಜಿ ವಿಚಾರಣೆಯನ್ನು ಕೂಡಾ ನಾಳೆಗೆ ಮುಂದೂಡಲಾಗಿದೆ.

ದರ್ಶನ್ ಪರ ಹಿರಿಯ ವಕೀಲ ಸಿಎನ್ ನಾಗೇಶ್ ವಾದ ಮಂಡಿಸಿದರು. ಈ ಹಿಂದೆ ಹಲವು ಬಾರಿ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಹಲವು ಕಾರಣಗಳಿಗೆ ಮುಂದೂಡಲಾಗಿದೆ. ಈಗಾಗಲೇ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ಮಂಜೂರಾಗಿ, ಜೈಲಿನಿಂದ ಬಿಡುಗಡೆಯಾಗಿದ್ದಾರೆ.


ದರ್ಶನ್‌ಗೆ ಜಾಮೀನು ಸಿಗಬಹುದೆಂಬ ಭರವಸೆಯಲ್ಲಿ ಅವರ ಅಭಿಮಾನಿಗಳು ಹಾಗೂ ಕುಟುಂಬದವರಿದ್ದರು. ಆದರೆ ಇದೀಗ ಭಾರೀ ನಿರಾಸೆಯಾಗಿದ್ದು, ನಾಳೆ ಮತ್ತೇ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.

ಇಂದು ಸಿವಿ ನಾಗೇಶ್​ ಅವರು ದೀರ್ಘವಾಗಿ ದರ್ಶನ್ ಪರ ವಾದ ಮಂಡನೆ ಮಾಡಿದರು. ಆರಂಭದಲ್ಲಿ ಮಾಧ್ಯಮಗಳ ವಿಚಾರ, ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ನ್ಯಾಯಾಲಯದ ಗಮನ ಸೆಳೆದ ವಕೀಲರು, ಮಾಧ್ಯಮಗಳ ವರದಿ ಆಧಾರದಲ್ಲಿ ತೀರ್ಪು ನೀಡಬಾರದೆಂದು ನ್ಯಾಯಾಧೀಶರ ಬಳಿ ಮನವಿ ಮಾಡಿದರು.

ಸಿವಿ ನಾಗೇಶ್ ಅವರ ಸುದೀರ್ಘ ವಾದವನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 04ರ ಮಧ್ಯಾಹ್ನ 12:30ಗೆ ಮುಂದೂಡಿದ್ದು, ನಾಳೇಯೂ ನಾಗೇಶ್ ಅವರು ವಾದ ಮುಂದುವರೆಸಲಿದ್ದಾರೆ. ಅದಾದ ಬಳಿಕ ಪ್ರಸನ್ನ ಅವರ ಆಕ್ಷೇಪಣೆ ಸಹ ಇರುವ ಸಾಧ್ಯತೆ ಇದೆ. ಆ ಬಳಿಕ ನ್ಯಾಯಾಧೀಶರು ಜಾಮೀನು ಅರ್ಜಿ ಕುರಿತಂತೆ ತೀರ್ಪು ನೀಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹನಿಮೂನ್ ಗೆ ತಾವು ಅಂದುಕೊಂಡ ಸ್ಥಳಕ್ಕೇ ಗಂಡನ ಜೊತೆ ಹೋದ ಸೋನಲ್ ಮೊಂಥೆರೋ