ನಟ ಛಾಯಾಸಿಂಗ್‌ ತವರು ಮನೆಯಲ್ಲಿ ಚಿನ್ನಾಭರಣ ಕಳವು: ಕೆಲಸದಾಕೆ ಅರೆಸ್ಟ್

Sampriya
ಬುಧವಾರ, 15 ಮೇ 2024 (14:34 IST)
Photo Courtesy X
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯ ನಟಿ ಛಾಯಾಸಿಂಗ್‌ ಅವರ ತವರು ಮನೆಯಲ್ಲಿ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲಸದಾಕೆಯನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎನ್‌ಜಿಓಎಸ್‌ ಕಾಲೋನಿ ನಿವಾಸಿ 43 ವರ್ಷದ ಉಷಾ ಬಂಧಿತ ಮಹಿಳೆ ಎಂದು ಗುರುತಿಸಲಾಗಿದೆ. ಆಕೆಯಿಂದ ₹ 4 ಲಕ್ಷ  ಮೌಲ್ಯದ 66 ಗ್ರಾಂ ಚಿನ್ನ ಮತ್ತು 155 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆ ಆಭರಣವನ್ನು ಬಹುಭಾಷಾ ನಟಿಯೂ ಆಗಿರುವ ಛಾಯಾ ಸಿಂಗ್‌ ಅವರಿಗೆ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಈಚೆಗೆ ಮರಳಿಸಿದರು.

ಎನ್‌ಎಚ್‌ಸಿಎಸ್‌ ಬಡಾವಣೆಯಲ್ಲಿ ವಾಸವಾಗಿರುವ ಬಹುಭಾಷಾ ನಟಿ ಛಾಯಾ ಸಿಂಗ್‌ ಅವರ ತಾಯಿ ಚಮನ್‌ ಲತಾ ಸಿಂಗ್‌ ಮನೆಯಲ್ಲಿ ಉಷಾ 2 ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ಈ ವೇಳೆ ಹಂತ-ಹಂತವಾಗಿ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಳು. ಏ.13ರಂದು ರೂಮಿನ ಬೀರುವಿನ ಲಾಕರ್‌ನ್ನು ಆರೋಪಿ, ಮುಚ್ಚುತ್ತಿರುವುದನ್ನು ಗಮನಿಸಿದ್ದ ಚಮನ್‌ ಲತಾ ಸಿಂಗ್‌, ಅನುಮಾನಗೊಂಡು ಆಕೆಯನ್ನು ಪ್ರಶ್ನಿಸಿದ್ದಾರೆ.

ಆಗ ಉಷಾ ತಡಬಡಾಯಿಸಿದ್ದಳು. ಕೊನೆಗೆ ಬೀರು ಪರಿಶೀಲನೆ ನಡೆಸಿದಾಗ ಕೆಲವು ಆಭರಣ ಕಳವಾಗಿದ್ದವು. ಈ ಬಗ್ಗೆ ಚಮನ್‌ ಲತಾ ಸಿಂಗ್‌ ಕೊಟ್ಟ ದೂರಿನ ಮೇರೆಗೆ ಬಸವೇಶ್ವರನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮಾಡಿದ್ದ ಸಾಲ ತೀರಿಸುವ ಸಲುವಾಗಿ ಆಭರಣ ಮತ್ತು ಹಣ ಕಳವು ಮಾಡಿದ್ದಾಗಿ ಆರೋಪಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ಮೊನ್ನೆ ದೈವದ ಅನುಕರಣೆ, ಇಂದು ಜನರಲ್ಲಿ ಕ್ಷಮೆಯಾಚಿಸಿದ ರಣವೀರ್ ಸಿಂಗ್

ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ರಣವೀರ್ ಸಿಂಗ್

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮುಂದಿನ ಸುದ್ದಿ
Show comments