72 ರ ವಯಸ್ಸಿನಲ್ಲೂ ವರ್ಷಕ್ಕೆ ಮೂರು ಹಿಟ್ ಸಿನಿಮಾ ಕೊಟ್ಟ ಮಮ್ಮುಟ್ಟಿ

Krishnaveni K
ಬುಧವಾರ, 15 ಮೇ 2024 (13:46 IST)
Photo Courtesy: Twitter
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸ್ಟಾರ್ ಕಲಾವಿದರು ವರ್ಷಕ್ಕೆ ಒಂದು ಸಿನಿಮಾ ಕೊಡುವುದೇ ಕಷ್ಟವಾಗಿದೆ. ಅಂತಹದ್ದರಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಒಂದೇ ವರ್ಷದಲ್ಲಿ ಮೂರು ಸಿನಿಮಾ ಮಾಡಿ ಮೂರೂ ಸೂಪರ್ ಹಿಟ್ ಆಗಿವೆ.

ವರ್ಷಕ್ಕೆ ಎರಡರಿಂದ ಮೂರು ಸಿನಿಮಾವಾದರೂ ಮಾಡಬೇಕು ಎಂಬುದು ಮಮ್ಮುಟ್ಟಿ ಫಾರ್ಮುಲಾ. ಇದನ್ನು ತಮ್ಮ ಮಗ ದುಲ್ಕರ್ ಸಲ್ಮಾನ್ ಗೂ ತಾಕೀತು ಮಾಡುತ್ತಾರಂತೆ ಅವರು. ಸಿನಿಮಾ ಸಂಖ್ಯೆ ಹೆಚ್ಚದಿದ್ದರೆ ಥಿಯೇಟರ್ ಗಳು ಉಳಿಯಲ್ಲ ಎನ್ನುವುದು ಅವರ ಅಭಿಪ್ರಾಯ. ಇದು ನಿಜವೂ ಹೌದು. ಸ್ಟಾರ್ ನಟರ ಸಿನಿಮಾಗಳು ಬರದೇ ಥಿಯೇಟರ್ ಗಳಿಗೆ ಉಳಿಗಾಲವಿರಲ್ಲ.

2023-24 ರ ಅವಧಿಯಲ್ಲಿ ಮಮ್ಮುಟ್ಟಿ ಒಟ್ಟು ಮೂರು ಸಿನಿಮಾಗಳನ್ನು ಕೊಟ್ಟರು. ಈ ಮೂರೂ ಸಿನಿಮಾಗಳು 40 ಪ್ಲಸ್ ಕೋಟಿ ಬ್ಯುಸಿನೆಸ್ ಮಾಡಿವೆ. ಅದರಲ್ಲೂ ಭ್ರಮಯುಗಂ 80 ಕೋಟಿ ಬ್ಯುಸಿನೆಸ್ ಮಾಡಿದರೆ ಇದಕ್ಕೆ ಮೊದಲು ಬಿಡುಗಡೆಯಾದ ಅಬ್ರಹಾಂ ಓಝ್ಲರ್ ಸಿನಿಮಾ 40 ಕೋಟಿ ಗಳಿಕೆ ಮಾಡಿತ್ತು. ಇದೀಗ ಟರ್ಬೋ ಎನ್ನುವ ಮತ್ತೊಂದು ಸಿನಿಮಾ ನೀಡುತ್ತಿದ್ದಾರೆ. ಇದರ ಕ್ರೇಜ್ ನೋಡಿದರೆ ಇದೂ ಕೂಡಾ 50 ಪ್ಲಸ್ ಬ್ಯುಸಿನೆಸ್ ಮಾಡುವುದು ಪಕ್ಕಾ ಎನಿಸುತ್ತಿದೆ.

ಮಮ್ಮುಟ್ಟಿಗೆ ಈಗ 72 ರ ಹರೆಯ. ಈ ವಯಸ್ಸಿನಲ್ಲೂ ಫೈಟ್, ಥ್ರಿಲ್ಲರ್ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಒಂದಾದ ಮೇಲೊಂದರಂತೆ ಹಿಟ್ ಕೊಡುತ್ತಲೇ ಇದ್ದಾರೆ. ಈ ಇಳಿವಯಸ್ಸಿನಲ್ಲೂ ಅವರ ಚಾರ್ಮ್ ಕಡಿಮೆಯಾಗಿಲ್ಲ. ಪ್ಯಾನ್ ಇಂಡಿಯಾ ಎಂದೆಲ್ಲಾ ತಲೆಯೇ ಕೆಡಿಸಿಕೊಳ್ಳದೇ ತಮ್ಮದೇ ಸಿನಿ ಲೋಕದಲ್ಲಿ ಮಮ್ಮುಟ್ಟಿ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ರಣವೀರ್ ಸಿಂಗ್

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮುಂದಿನ ಸುದ್ದಿ
Show comments