Select Your Language

Notifications

webdunia
webdunia
webdunia
webdunia

ಮೊದಲು ವೋಟ್ ಹಾಕಿ ಆಮೇಲೆ ಮಾತನಾಡಿ: ದೇಶ ಪ್ರಗತಿ ಕಂಡಿದೆ ಎಂದ ರಶ್ಮಿಕಾ ಮಂದಣ್ಣ ಟ್ರೋಲ್

Rashmika Mandanna

Krishnaveni K

ಮುಂಬೈ , ಬುಧವಾರ, 15 ಮೇ 2024 (12:45 IST)
ಮುಂಬೈ: ಲೋಕಸಭೆ ಚುನಾವಣೆ ನಡೆಯುತ್ತಿರುವಾಗಲೇ ನಟಿ ರಶ್ಮಿಕಾ ಮಂದಣ್ಣ ಕಳೆದ 10 ವರ್ಷಗಳಲ್ಲಿ ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಹೊಗಳಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಪ್ರಧಾನಿ ಮೋದಿ ಉದ್ಘಾಟಿಸಿದ್ದ ಅಟಲ್ ಸೇತು ಬಗ್ಗೆ ಮಾತನಾಡಿದ ರಶ್ಮಿಕಾ, ಮೊದಲು ನವಿ ಮುಂಬೈನಿಂದ ಮುಂಬೈಗೆ ಪ್ರಯಾಣಿಸಲು ಎರಡೂವರೆ ಗಂಟೆ ಬೇಕಾಗುತ್ತಿತ್ತು. ಈಗ 20 ನಿಮಿಷದಲ್ಲಿ ಪ್ರಯಾಣಿಸಬಹುದು. ಅಸಾಧ‍್ಯವಾದುದನ್ನು ಮಾಡಿ ತೋರಿಸಿದ್ದಾರೆ. ಭಾರತ ಅಭಿವೃದ್ಧಿಯಾಗುತ್ತಿರುವುದು ನೋಡಿದರೆ ಹೆಮ್ಮೆಯಾಗುತ್ತದೆ ಎಂದಿದ್ದಾರೆ.

ಅವರ ಈ ಹೇಳಿಕೆ ವೈರಲ್ ಆಗಿದೆ. ಕಳೆದ 10 ವರ್ಷಗಳಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಕಂಡಿದೆ. ಭಾರತ ವೇಗವಾಗಿ ಬೆಳೆಯುತ್ತಿದೆ. ಈ ಅಟಲ್ ಸೇತುವೆ ಏಳು  ವರ್ಷದಲ್ಲಿ ಪೂರ್ಣಗೊಂಡಿದೆಯಂತೆ. ಹೊಸ ಭಾರತ ಉದಯವಾಗುತ್ತಿದೆ. ಭಾರತ ವಿಶ್ವದ ಬುದ್ಧಿವಂತ ದೇಶ ಎಂದಿದ್ದಾರೆ.

ನಮ್ಮ ದೇಶದ ಪ್ರಗತಿ ಇಲ್ಲಿಗೇ ನಿಲ್ಲಬಾರದು. ಇದಕ್ಕಾಗಿ ದೇಶದ ಯುವಕರು ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಬೇಕು ಎಂದು ಪರೋಕ್ಷವಾಗಿ ಮೋದಿ ಬೆಂಬಲಿಸಿ ಮಾತನಾಡಿದ್ದಾರೆ. ಆದರೆ ರಶ್ಮಿಕಾ ಈ ಕಾಮೆಂಟ್ ಗೆ ನೆಟ್ಟಿಗರು ಮೊದಲು ವೋಟ್ ಹಾಕಿ, ಆಮೇಲೆ ಈ ರೀತಿ ಭಾಷಣ ಬಿಗಿಯಿರಿ ಎಂದು ಟ್ರೋಲ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ ಬಿ ಶೆಟ್ಟಿ ಟ್ಯಾಲೆಂಟ್ ನ್ನು ಕನ್ನಡಿಗರು ಸರಿಯಾಗಿ ಬಳಸಿಕೊಂಡಿಲ್ಲ