Select Your Language

Notifications

webdunia
webdunia
webdunia
webdunia

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಸಿದ್ದರಾಮಯ್ಯ ಪ್ರಚಾರದ ಟ್ರಿಕ್ ಹೀಗಿತ್ತು

Siddaramaiah

Krishnaveni K

ಬೆಂಗಳೂರು , ಶುಕ್ರವಾರ, 10 ಮೇ 2024 (14:49 IST)
ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಶತಾಯ ಗತಾಯ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರಬೇಕು ಎಂದು ಕರ್ನಾಟಕ ಕಾಂಗ್ರೆಸ್ ಸಾಕಷ್ಟು ಪ್ರಯತ್ನ ನಡೆಸಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯಗೆ ಇದು ವೈಯಕ್ತಿಕ ದೃಷ್ಟಿಯಿಂದಲೂ ಮಹತ್ವದ ಚುನಾವಣೆಯಾಗಿತ್ತು.

ಒಂದು ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ನಿರೀಕ್ಷಿತ ಸ್ಥಾನ ಗಳಿಸದೇ ಹೋದರೆ ಮುಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಪಟ್ಟಕ್ಕೆ ಕುತ್ತು ಬರುವುದು ಗ್ಯಾರಂಟಿ. ಹೀಗಾಗಿ ಅವರು ಪ್ರಚಾರಕ್ಕಾಗಿ ಹಲವು ಹೊಸ ಅಭಿಯಾನಗಳನ್ನು ಮಾಡಿದರು. ಹೊಸ ಟ್ರಿಕ್ ಗಳನ್ನು ಬಳಸಿದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಬಾರಿ ಕಾಂಗ್ರೆಸ್ ಮಾಡಿದ ಕೆಲವು ವಿನೂತನ ಪ್ರಚಾರ ಪ್ರಯೋಗಗಳ ವಿವರ ಇಲ್ಲಿದೆ ನೋಡಿ.

webdunia
ಮುಖ್ಯಮಂತ್ರಿಗಳು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸರಾಸರಿ ದಿನಕ್ಕೆ 14-18 ಗಂಟೆ (ಆರೋಗ್ಯದಲ್ಲಿ ತೀವ್ರ ಸ್ವರೂಪದ ವ್ಯತ್ಯಾಸ ಆದಾಗಲೂ) ಪ್ರತೀ ದಿನ ಶ್ರಮಿಸಿದ್ದಾರೆ (ರಸ್ತೆ ಮಾರ್ಗ/ವಾಯು ಮಾರ್ಗದ ಪ್ರಯಾಣದ ಅವಧಿಯನ್ನೂ ಸೇರಿಸಿ)
 
 
ಚುನಾವಣೆ ಘೋಷಣೆ ಆಗುವುದಕ್ಕೂ ಮೊದಲು 14 ಗ್ಯಾರಂಟಿ ಸಮಾವೇಶಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಎಲ್ಲಾ ಸಮಾವೇಶಗಳಲ್ಲೂ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳ ತಾತ್ವಿಕತೆ, ಅಗತ್ಯ, ಅನಿವಾರ್ಯತೆ ಮತ್ತು ಪರಿಣಾಮಗಳನ್ನು ತಮ್ಮದೇ ಶೈಲಿಯಲ್ಲಿ ಜನರಿಗೆ ಮನದಟ್ಟು ಮಾಡಿಸಿದ್ದರು. ಪ್ರಮುಖವಾಗಿ ನೆರೆದಿದ್ದ ಜನರ ಜತೆ ಸಂವಾದ ನಡೆಸುತ್ತಲೇ ಅವರನ್ನು ಒಳಗೊಳ್ಳುತ್ತಾ ಜನಪದ (ಜನಪರ) ಕಲಾವಿದರ ಶೈಲಿಯಲ್ಲಿ ಸ್ಪಂದಿಸಿದ್ದು ಪರಿಣಾಮಕಾರಿಯಾಗಿತ್ತು 
 
ಚುನಾವಣೆ ಘೋಷಣೆಯಾದ ಬಳಿಕ ಮೊದಲ ಮತ್ತು ಎರಡನೇ ಹಂತದ 28 ಲೋಕಸಭಾ ಕ್ಷೇತ್ರಗಳ 76 ಸ್ಥಳಗಳಲ್ಲಿ "ಪ್ರಜಾಧ್ವನಿ-2" ಜನ ಸಮಾವೇಶಗಳಲ್ಲಿ ಹೈವೋಲ್ಟೇಜ್ ಭಾಷಣಗಳ ಮೂಲಕ ರಾಜ್ಯದ ಜನರಿಗೆ 2024ರ ಲೋಕಸಭಾ ಚುನಾವಣೆಯ ಮಹತ್ವವನ್ನು ಮನಮುಟ್ಟುವಂತೆ ಅರ್ಥ ಮಾಡಿಸಿದ್ದಕ್ಕೆ ನಾವುಗಳು ಸಾಕ್ಷಿಯಾದವು.

ಪ್ರಜಾಧ್ವನಿ ಜನ-ಸಮಾವೇಶದ ಈತರೆ ಹೈಲೈಟ್ಸ್ ಗಳು 
 
1) ಇಲ್ಲಿ ನಾನೇ ಅಭ್ಯರ್ಥಿ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ನಾನು ಗೆದ್ದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸುತ್ತಿದ್ದಂತೆ ಜನ ಕುಳಿತಲ್ಲಿಂದ ಮೇಲೆದ್ದು ಎರಡೂ ಕೈಗಳನ್ನು ಮೇಲೆತ್ತಿ, ಅವರ ಮಾತಿಗೆ  ಸಮ್ಮತಿ ಸೂಚಿಸುತ್ತಿದ್ದರು 
 
2)ಕಪ್ಪು ಮುಖ-ಬೆಳ್ಳಿ ಗಡ್ಡದ ಜನರ ಬಾಯಲ್ಲಿ ಅಂಬಾನಿ-ಅದಾನಿ: ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಆರ್ಥಿಕತೆಗೆ ಎಂಥಾ ದುಸ್ಥಿತಿ ತಂದಿಟ್ಟರು ಎನ್ನುವುದನ್ನು ವಿವರಿಸುವಾಗ ಪ್ರತೀ ಸಭೆಗಳಲ್ಲೂ ರೊಚ್ಚಿಗೆದ್ದ ಜನರ ಬಾಯಲ್ಲಿ ಅಂಬಾನಿ-ಅದಾನಿ ಹೆಸರು ಪ್ರಸ್ತಾಪವಾಗುತ್ತಿದ್ದದ್ದು ವಿಶೇಷವಾಗಿತ್ತು. ಇದು ಮಾತ್ರ ಚಾಮರಾಜನಗರದಿಂದ ಬೀದರ್ ವರೆಗೂ ಜನರಿಂದ ವ್ಯಕ್ತವಾಗುತ್ತಿದ್ದ ಸಾಮಾನ್ಯ ವಿದ್ಯಮಾನವಾಗಿತ್ತು 
 
3)ಖಾಲಿ ಚೊಂಬಿಗೆ ಭರ್ಜರಿ ಟಿಆರ್ ಪಿ: ಮಾನ್ಯ ಮುಖ್ಯಮಂತ್ರಿಗಳ ನಾಟಿ ಶೈಲಿಯ ಭಾಷಣಗಳಲ್ಲಿ ಅರ್ಥಪೂರ್ಣವಾದ ಹಾಸ್ಯವೂ ಮೇಳೈಸಿದ್ದರಿಂದ ರಾಜ್ಯದ ಜನತೆಗೆ ಮನರಂಜನೆಯೂ ಸಿಕ್ಕಿತ್ತು. ಹತ್ತು ವರ್ಷಗಳಲ್ಲಿ ಮೋದಿ ನಿಮ್ಮ ಕೈಗೆ ಏನು ಕೊಟ್ಟರು ಎಂದರು ಜನರೆಡೆಗೆ ಬೆರಳು ಮಾಡಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರೆ, ನೆರೆದಿದ್ದ ಜನತೆ  "ಖಾಲಿ ಚೊಂಬು" ಎಂದು ಕೂಗುತ್ತಿದ್ದರು 
 
4) ಮಾನ್ಯ ಮುಖ್ಯಮಂತ್ರಿಗಳು ತಮ್ಮ ಅವಧಿಯಲ್ಲಿ ಕೊಟ್ಟ ಭಾಗ್ಯಗಳನ್ನು ಒಂದೊಂದಾಗಿ ಹೆಸರಿಸುತ್ತಾ...ಅನ್ನಭಾಗ್ಯ ಕೊಟ್ಟಿದ್ದು ಯಾರು ? ಎಂದು ಕೇಳುತ್ತಿದ್ದರು. ಜನತೆ ಸಿದ್ದರಾಮಯ್ಯ ಎಂದು ಕೂಗುತ್ತಿದ್ದರು. 
 
5) ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದ‌ ನೆತ್ತಿ ಸುಡುವ ಬಿಸಿಲಿನಲ್ಲೂ ಮಧ್ಯಾಹ್ನದ ವೇಳೆಯಲ್ಲೂ ಕಪ್ಪು ಮುಖ ಬೆಳ್ಳಿ ಗಡ್ಡದ ತಲೆಗೆ ಟವೆಲ್ ಸುತ್ತಿದ ಗಂಡಸರು, ಸೆರಗು ತಲೆಗೆ ಸುತ್ತಿಕೊಂಡ ಮಹಿಳೆಯರು ಗಂಟೆಗಟ್ಟಲೆ ಕಾದು ಭಾಷಣ ಕೇಳುತ್ತಿದ್ದರು.
 
6) ಮುಖ್ಯಮಂತ್ರಿಗಳು ಮೋದಿಯವರ "ಅಚ್ಛೇ ದಿನ್ ಆಯೇಂಗೆ" ಎನ್ನುವ ಸುಳ್ಳು ಭರವಸೆಯನ್ನು ಲೇವಡಿ ಮಾಡುವಾಗ ದೀರ್ಘವಾಗಿ "ಅಚ್ಚೆಏಏಏಏಏ ದಿನ್ ಆಯೇಂಗೇ" ಎಂದು ರಾಗ ಎಳೆಯುತ್ತಿದ್ದರೆ, ಸಭೆಯಲ್ಲಿದ್ದ ಜನರೂ ಕೂಡ ರಾಗವಾಗಿ ಕೋರಸ್ ಕೊಡುತ್ತಿದ್ದರು.
 
8) ದೇಹದ ನೀರನ್ನೆಲ್ಲಾ ಹೀರುವ ಸುಡು ಬಿಸಿಲಿನಲ್ಲೇ 74 ಪ್ರಜಾಧ್ವನಿ ಜನ‌ಸಮಾವೇಶಗಳು ನಡೆದರೆ ಹಾವೇರಿ ಮತ್ತು ದಾವಣಗೆರೆ ಜನ ಸಮಾವೇಶಗಳಲ್ಲಿ ಮಾತ್ರ ತುಂತುರು ಹನಿಯ ಜತೆಗೆ ಎರಡನೇ ಹಂತದ ಚುನಾವಣಾ ಪ್ರಚಾರಕ್ಕೆ ಮೇ5 ರಂದು ತೆರೆ ಬಿತ್ತು 
 
ಗಮನಿಸಬೇಕಾದ ಅತ್ಯಂತ ಪ್ರಮುಖ ಸಂಗತಿಗಳು...
 
14 ಗ್ಯಾರಂಟಿ ಸಮಾವೇಶಗಳು ಮತ್ತು 76 ಪ್ರಜಾಧ್ವನಿ ಜನ ಸಮಾವೇಶಗಳು ಸೇರಿ 90 ಸಭೆಗಳಿಗಾಗಿ ಮುಖ್ಯಮಂತ್ರಿಗಳು ರಾಜ್ಯದ ಉದ್ದಗಲಕ್ಕೂ ಪ್ರಯಾಣಿಸಿದ್ದು ಅಂದಾಜು ಬರೋಬ್ಬರಿ 20 ರಿಂದ 26 ಸಾವಿರ ಕಿಲೋಮೋಟರ್.  (ಮುಖ್ಯಮಂತ್ರಿಗಳ ಮಾಧ್ಯಮ ತಂಡದ ಎರಡು ವಾಹನಗಳು ಪ್ರಯಾಣಿಸಿದ ಕಿಲೋಮೀಟರ್ ಆಧಾರದಲ್ಲಿ) 
 
ಈ 90 ಸಭೆಗಳು/ರೋಡ್ ಶೋಗಳಲ್ಲಿ 7 ಸಾವಿರದಿಂದ 60  ಸಾವಿರದವರೆಗೂ ಜನ ಸೇರಿದ್ದರು 
 
ರೋಡ್ ಶೋ/ ಸಭೆಗಳಲ್ಲಿ ಭಾಗವಹಿಸಿದ ಜನರ ಪ್ರಮಾಣ ಸರಾಸರಿ 15 ಸಾವಿರ ಎಂದು ಲೆಕ್ಕ ಹಿಡಿದರೂ ಒಟ್ಟಾರೆ 14 ಲಕ್ಷದಷ್ಟು ಜನರನ್ನು ಮುಖ್ಯಮಂತ್ರಿಗಳು ನೇರಾ ನೇರಾ ತಮ್ಮ ಮಾತುಗಳಲ್ಲಿ ಬೆಸೆದಿದ್ದಾರೆ
 
 
ಈ ಬಾರಿ ಲೋಕಸಭೆ ಚುನಾವಣೆಗಾಗಿ ಸಿದ್ದರಾಮಯ್ಯ ಒಟ್ಟು  14 ಗ್ಯಾರಂಟಿ ಸಮಾವೇಶಗಳು, 76 ಪ್ರಜಾಧ್ವನಿ ಸಮಾವೇಷಗಳಲ್ಲಿ ಪಾಲ್ಗೊಂಡರು. ರಾಜ್ಯಾದ್ಯಂತ 22 ರಿಂದ 26 ಸಾವಿರ ಕಿ.ಮೀ. ಸಂಚಾರ ಮಾಡಿದ್ದಾರೆ. ಸರಾಸರಿ 15 ಸಾವಿರ ಮಂದಿಗೆ ಮುಖ್ಯಮಂತ್ರಿಗಳ ರೋಡ್ ಶೋನಲ್ಲಿ ಪಾಲ್ಗೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ ತಮ್ಮ ಪ್ರಚಾರ ವೈಖರಿಯನ್ನು ಈ ರೀತಿ ವಿವರಿಸಿದ್ದಾರೆ.


ಈ ಚುನಾವಣೆ ಸಿಎಂ ಸಿದ್ದರಾಮಯ್ಯ ಪಾಲಿಗೆ ಮಹತ್ವದ್ದಾಗಿತ್ತು. ಯಾಕೆಂದರೆ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತರೆ ಅದರ ನೇರ ಹೊಣೆ ಸಿದ್ದರಾಮಯ್ಯ ಹೆಗಲಿಗೆ ಬರಲಿದೆ. ಇನ್ನೊಂದೆಡೆ ಸಿಎಂ ಪಟ್ಟಕ್ಕಾಗಿ ಡಿಕೆ ಶಿವಕುಮಾರ್ ಹೊಂಚು ಹಾಕಿ ಕುಳಿತಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಿಸಿ ಹೈಕಮಾಂಡ್ ಇಂಪ್ರೆಸ್ ಮಾಡುವುದು ಅವರ ಪಾಲಿಗೆ ಮಹತ್ವದ್ದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಕೇಜ್ರಿವಾಲ್‌ಗೆ ತಾತ್ಕಾಲಿಕ ರಿಲೀಫ್: ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು