Select Your Language

Notifications

webdunia
webdunia
webdunia
webdunia

ಖ್ಯಾತ ನಟ ಆರ್ಯ ಕೈ ಹಿಡಿಯಲಿರುವ ನಟಿ ಯಾರು ಗೊತ್ತಾ?

ಖ್ಯಾತ ನಟ ಆರ್ಯ ಕೈ ಹಿಡಿಯಲಿರುವ ನಟಿ ಯಾರು ಗೊತ್ತಾ?
ಚೆನ್ನೈ , ಶುಕ್ರವಾರ, 1 ಫೆಬ್ರವರಿ 2019 (09:14 IST)
ಚೆನ್ನೈ: ತಮಿಳಿನ ಖ್ಯಾತ ನಾಯಕ ನಟ ಆರ್ಯ ಕೊನೆಗೂ ಮದುವೆಯಾಗಲು ಮನಸ್ಸು ಮಾಡಿದ್ದಾರೆ. ನಟಿ ಸಯ್ಯೇಷಾ ಕೈ ಹಿಡಿಯಲಿದ್ದಾರೆ ಆರ್ಯ.


ಇವರಿಬ್ಬರೂ ಕಳೆದ ಕೆಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯಿತ್ತು. ಇದೀಗ ಎರಡೂ ಮನೆಯವರು ಇಬ್ಬರ ಮದುವೆ ಮಾತುಕತೆ ನಡೆಸುತ್ತಿದ್ದಾರಂತೆ.

ಮಾರ್ಚ್ 9 ಮತ್ತು 10 ರಂದು ಹೈದರಾಬಾದ್ ನಲ್ಲಿ  ಮದುವೆ ನಡೆಸಲು ಎರಡೂ ಕುಟುಂಬಗಳೂ ತೀರ್ಮಾನಿಸಿವೆ ಎನ್ನಲಾಗಿದೆ. ಘಜನಿಕಾಂತ್ ಚಿತ್ರದ ಶೂಟಿಂಗ್ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಬಾಲಿವುಡ್ ತಾರೆ ದಿಲೀಪ್ ಕುಮಾರ್ ಸಂಬಂಧಿಯೂ ಆಗಿರುವ ಸಯ್ಯೇಷಾ ಜತೆಗೆ ಈಗ ಆರ್ಯ ಕಾಪ್ಪಾನ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಈ ಸಿನಿಮಾ ಚಿತ್ರೀಕರಣ ಮುಗಿದ ಬಳಿಕ ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಖರ್ಚಿಗೆ ಜೇಬಲ್ಲಿ ದುಡ್ಡು ಬೇಕಲ್ವಾ? ಅದಕ್ಕೆ ಕಿರುತೆರೆ: ರವಿಚಂದ್ರನ್ ಮನದಾಳದ ಮಾತು