Select Your Language

Notifications

webdunia
webdunia
webdunia
webdunia

ಸಾಹೋ ಮದುವೆ ಮುಗಿದ ಮೇಲೆ ಪ್ರಭಾಸ್ ಮದುವೆ!

ಪ್ರಭಾಸ್
ಹೈದರಾಬಾದ್: ಬಾಹುಬಲಿ ಸಿನಿಮಾ ಮುಗಿದ ಮೇಲೆ ಪ್ರಭಾಸ್ ಮದುವೆ ಬಗ್ಗೆ ಭಾರೀ ಗುಲ್ಲೆದ್ದಿತ್ತು. ಪ್ರಭಾಸ್ ಅನುಷ್ಕಾರನ್ನೇ ಮದುವೆಯಾಗುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಇಬ್ಬರೂ ಅದನ್ನು ನಿರಾಕರಿಸಿದ್ದರು.


ಇದೀಗ ಮತ್ತೆ ಪ್ರಭಾಸ್ ಮದುವೆ ಬಗ್ಗೆ ಸುದ್ದಿ ಓಡಾಡುತ್ತಿದೆ. ಸದ್ಯಕ್ಕೆ ಪ್ರಭಾಸ್ ಸಾಹೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಆಗಸ್ಟ್ ನಲ್ಲಿ ತೆರೆ ಕಾಣಲಿದೆ. ಆ ಸಿನಿಮಾ ತೆರೆ ಕಂಡ ಬಳಿಕ ಪ್ರಭಾಸ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಂದಿದೆ.

ಪ್ರಭಾಸ್ ಸಂಬಂಧಿಯೊಬ್ಬರು ತೆಲುಗು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಭಾಸ್ ಸಾಹೋ ನಂತರ ಮದುವೆಯಾಗಲಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಇದೇ ವ್ಯಕ್ತಿ ಬಾಹುಬಲಿ ನಂತರವೂ ಇದೇ ಹೇಳಿಕೆ ನೀಡಿದ್ದರು. ಹಾಗಾಗಿ ಇದೂ ಕೂಡಾ ಕೇವಲ ಗಾಸಿಪ್ ಆಗಿರುವ ಸಾಧ್ಯತೆಯಿದೆ. ಆದರೆ ಅಭಿಮಾನಿಗಳು ಮಾತ್ರ ಅಂದು, ಇಂದೂ ಪ್ರಭಾಸ್ ಅನುಷ್ಕಾ ಶೆಟ್ಟಿಯನ್ನು ಮದುವೆಯಾಗಲಿ ಎಂದೇ ಹಾರೈಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಾಯಕರಿಗೆ ಈಗ ಬಾಲಿವಡ್ ನಟಿ ಕರೀನಾ ಕಪೂರ್ ಬೇಕೇ ಬೇಕಂತೆ!