150 ಕೋಟಿ ಕ್ಲಬ್ ಸೇರಿದ ಕೆಜಿಎಫ್: ಬಾಹುಬಲಿ, ರೋಬೋಟ್ ರೇಂಜ್ ಗೇರಿದ ರಾಕಿ ಬಾಯ್

ಮಂಗಳವಾರ, 1 ಜನವರಿ 2019 (09:51 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಎರಡನೇ ವಾರವೂ ಎಲ್ಲಾ ಭಾಷೆಯಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಇದೀಗ 150 ಕೋಟಿ ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿ ಸೇರಿದೆ.


70 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕನ್ನಡ ಸಿನಿಮಾ ಈಗ ಹಿಂದಿ, ತಮಿಳು, ತೆಲುಗು ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಒಟ್ಟಾಗಿ 150 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಮೂಲಕ ಬಾಹುಬಲಿ, ರೋಬೋಟ್ ಬಳಿಕ ಪ್ರಾದೇಶಿಕ ಭಾಷೆಯ ಸಿನಿಮಾವೊಂದು ಹಿಂದಿ ಸೇರಿದಂತೆ ಎಲ್ಲಾ ಭಾಷೆಯಲ್ಲಿ ಬಿಡುಗಡೆಯಾಗಿ 150 ಕೋಟಿ ರೂ. ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗಿದೆ.

ವಿದೇಶಗಳಲ್ಲೂ ದಾಖಲೆ ಬರೆದಿರುವ ಕೆಜಿಎಫ್ ಗೆ ಈ ವಾರ ರಣವೀರ್ ಸಿಂಗ್ ಅಭಿನಯದ ‘ಸಿಂಬ’ ಚಿತ್ರದ ಬಿಡುಗಡೆಯೂ ದೊಡ್ಡ ಮಟ್ಟಿಗೆ ಹೊಡೆತ ನೀಡಿಲ್ಲ ಎನ್ನುವುದೇ ಹೆಗ್ಗಳಿಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಶ್ಮಿಕಾ ಮಂದಣ್ಣ ಟ್ವಿಟರ್ ನಲ್ಲಿ ಕಾಣಿಸಿಕೊಂಡ ರಕ್ಷಿತ್ ಶೆಟ್ಟಿ!