‘ಮುಂಗಾರು ಮಳೆ’ ನೆನಪಿನಲ್ಲಿ ನೆನೆದ ಗೋಲ್ಡನ್ ಸ್ಟಾರ್ ಗಣೇಶ್

ಭಾನುವಾರ, 30 ಡಿಸೆಂಬರ್ 2018 (06:09 IST)
ಬೆಂಗಳೂರು: ಇಂದು ಕೆಜಿಎಫ್ ಸಿನಿಮಾ ಕನ್ನಡ ಸಿನಿಮಾವನ್ನು ವಿಶ್ವದ ಗಮನ ಸೆಳೆಯುವಂತೆ ಮಾಡಿದೆ. ಆದರೆ ಇದೇ 12 ವರ್ಷಕ್ಕೆ ಮೊದಲು ಕನ್ನಡ ಸಿನಿಮಾಕ್ಕೆ ಹೊಸದೊಂದು ಹುರುಪು ಕೊಟ್ಟ ಮುಂಗಾರು ಮಳೆ ಬಿಡುಗಡೆಯಾಗಿತ್ತು.


ಆ ಸಿನಿಮಾ ಅದೆಷ್ಟು ಮ್ಯಾಜಿಕ್ ಮಾಡಿತ್ತು ಎಂದರೆ ಬೇರೆ ಭಾಷೆಗೂ ಸಿನಿಮಾ ರಿಮೇಕ್ ಆಗಿತ್ತು. ಆ ಸಿನಿಮಾ ಮೂಲಕ ನಟನಾಗಿ ಗಣೇಶ್, ನಿರ್ದೇಶಕನಾಗಿ ಯೋಗರಾಜ್ ಭಟ್, ಸಂಗೀತ ನಿರ್ದೇಶಕನಾಗಿ ಮನೋಮೂರ್ತಿ ಮನೆ ಮಾತಾದರು.

ಇದೀಗ ಆ ಸಿನಿಮಾಗೆ 12 ವರ್ಷ ತುಂಬಿದೆ ಎಂದರೆ ನಂಬಲೇ ಕಷ್ಟ. ಈ ಸಿನಿಮಾ ಮಾಡಿದ ದಾಖಲೆಗಳು, ಸಂಗೀತ, ಹಾಡುಗಳ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡು ಹಳೇ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಬ್ಬಾ..! ಕೆಜಿಎಫ್ ನೋಡಲು ನಟಿ ಅಮೂಲ್ಯ ಖರೀದಿಸಿದ ಟಿಕೆಟ್ ಗಳೆಷ್ಟು ಗೊತ್ತಾ?!