Publish Date: Fri, 21 Aug 2020 (16:08 IST)
Updated Date: Fri, 21 Aug 2020 (16:10 IST)
ಬಾಲಿವುಡ್ ನಟ, ಮಿಸ್ಟರ್ ಫರ್ಪೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ವಿರುದ್ಧ ನಟಿ ಕಂಗನಾ ರಣಾವತ್ ಕಿಡಿಕಾಡಿದ್ದಾರೆ.
ಟರ್ಕಿಯ ಪ್ರಥಮ ಮಹಿಳೆ ಎಮೈನ್ ಎರ್ಡೊಗನ್ ಅವರನ್ನು ಭೇಟಿಯಾಗಿದ್ದಕ್ಕಾಗಿ ಅಮೀರ್ ಖಾನ್ ಅಪಾರ ಟೀಕೆಗೆ ಒಳಗಾಗುತ್ತಿದ್ದಾರೆ.
ಅಮೀರ್ ಉದ್ದೇಶಗಳನ್ನು ನಟಿ ಕಂಗನಾ ಪ್ರಶ್ನಿಸಿದ್ದಾರೆ, “ಅಮೀರ್ ಭಾರತದಲ್ಲಿ ಅಸಹಿಷ್ಣುತೆಯ ಬಗ್ಗೆ ದೂರು ನೀಡುತ್ತಾರೆ. ಆದರೆ ಟರ್ಕಿಗೆ ಹೋಗುತ್ತಾರೆ ಎಂದು ಟೀಕಿಸಿದ್ದಾರೆ.
ಅಮೀರ್ ಡಬಲ್ ಸ್ಟ್ಯಾಂಡರ್ಡ್ ಹೊಂದಿರುವ ವ್ಯಕ್ತಿಯಾಗಿ ಕಾಣುತ್ತಾನೆ. ನಾನು, ಅಭಿಮಾನಿಯಾಗಿ ಮತ್ತು ಹಿತೈಷಿಯಾಗಿ, ಈ ವಿಷಯದಲ್ಲಿ ಅಮೀರ್ ಖಾನ್ ಕ್ಲೀನ್ ಆಗಿ ಬರಬೇಕೆಂದು ಬಯಸುತ್ತೇನೆ ಎಂದು ನಟಿ ಕಂಗನಾ ರಣಾವತ್ ಸಲಹೆ ಕೊಟ್ಟಿದ್ದಾರೆ.