Select Your Language

Notifications

webdunia
webdunia
webdunia
webdunia

‘ಪುಷ್ಪಾ’ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಶೂಟಿಂಗ್ ಮಾಡುತ್ತಿರುವ ‘ಆಚಾರ್ಯ’ ಚಿತ್ರತಂಡ

ಶೂಟಿಂಗ್
ಹೈದರಾಬಾದ್ : ನಿರ್ದೇಶಕ ಸುಕುಮಾರ್ ಮತ್ತು ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಚಿತ್ರದ ಶೂಟಿಂಗ್ ಹೆಚ್ಚಾಗಿ ಕಾಡಿನಲ್ಲಿ ನಡೆಯುತ್ತಿದೆ. ಕೆಂಪು ಶ್ರೀಗಂಧ ಕಳ್ಳಸಾಗಾಣಿಕೆಯ ವಿರುದ್ಧ ಸಿದ್ಧವಾಗುತ್ತಿರುವ ಈ ಚಿತ್ರಕ್ಕಾಗಿ ಮಾರೆಡು ಮಿಲ್ಲಿ ಕಾಡುಗಳಲ್ಲಿ  ವಿಶೇಷ ದುಬಾರಿ ಸೆಟ್ ನಿರ್ಮಿಸಲಾಗಿದೆ.

ಇದೀಗ ಈ ನಡುವೆ ಪುಷ್ಪಾ ಚಿತ್ರದ ಸೆಟ್ ನ್ನು ಚಿರಂಜೀವಿ ಅವರ ‘ಆಚಾರ್ಯ’ ಚಿತ್ರತಂಡ ಬಳಸಿಕೊಳ್ಳಲು ಬಯಸಿದ್ದಾರೆ  ಎಂಬುದಾಗಿ ತಿಳಿದುಬಂದಿದೆ. ‘ಆಚಾರ್ಯ’ ಚಿತ್ರದಲ್ಲಿ ನಟ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಚಿತ್ರೀಕರಣ ಕಾಡಿನಲ್ಲಿ ಚಿತ್ರೀಕರಿಸಬೇಕಿದೆ. ಹೀಗಾಗಿ ಪುಷ್ಪಾ ಚಿತ್ರದ ಸೆಟ್ ಅನ್ನು ಬಳಸಿಕೊಳ್ಳುವ ನಿರ್ಧಾರ ಮಾಡಿದ್ದು, ಇದೀಗ ಸೆಟ್ ನಲ್ಲಿ ಚರಣ್ ಅವರ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲಾರ್ ರಿಮೇಕ್ ಚಿತ್ರನಾ? ಗೊಂದಲ ಸೃಷ್ಟಿಸಿದೆ ಸಂಗೀತ ನಿರ್ದೇಶಕ ರವಿ ಬಸ್ರೂರ್ ಹೇಳಿಕೆ