Select Your Language

Notifications

webdunia
webdunia
webdunia
webdunia

ಅಕ್ಕಂಗೆ ಜೈಲಲ್ಲೂ ಮೇಕಪ್ ಕಿಟ್: ಪವಿತ್ರಾ ಗೌಡ ಟ್ರೋಲ್

pavitra gowda

Sampriya

ಬೆಂಗಳೂರು , ಭಾನುವಾರ, 23 ಜೂನ್ 2024 (18:46 IST)
photo Courtesy Instagram
ಬೆಂಗಳೂರು: ಹೈಫೈ ಜೀವನದ ಜತೆಗೆ ಆಗಾಗ ಫಾರಿನ್ ಟೂರ್,  ಟ್ರೆಂಡಿ ಡ್ರೆಸ್‌ನಲ್ಲಿ ಪೋಟೋ ಶೂಟ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದ ನಟ ದರ್ಶನ ಆಪ್ತೆ ಪವಿತ್ರಾ ಗೌಡ ಸದ್ಯ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.

ಚಿತ್ರದುರ್ಗಾದ ರೇಣುಕಸ್ವಾಮಿ ಕಿಡ್ನಾಪ್, ಚಿತ್ರಹಿಂಸೆ ಹಾಗೂ ಕೊಲೆ ಪ್ರಕರಣದ ಸೂತ್ರದಾರಿಯಾಗಿರುವ ಪವಿತ್ರಾ ಗೌಡ ಅವರು ಇದೀಗ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಪವಿತ್ರಾಳನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿ ವಾಪಾಸ್ಸಾಗುತ್ತಿರುವ ವೇಳೆ ತೆಗೆದ ಫೋಟೋವನ್ನು ಟ್ರೋಲ್ ಮಾಡಲಾಗುತ್ತಿದೆ.

'ಅಕ್ಕಂಗೆ ಜೈಲಿನಲ್ಲು ಮೇಕಪ್‌ಕಿಟ್ ಕೊಡ್ತಾವ್ರ ಅಂತ, ಹೇಳಿಕೊಳ್ಳೋ ಅಂತ ಫಿಗರ್ ತರ ಏನು ಇಲ್ವ ಅಲ್ವ' ಎಂದು ಕಾಲೆಳೆಯುತ್ತಿದ್ದಾರೆ. ಇದೇ ಸಂದರ್ಭದಲ್ಲೇ ಪವಿತ್ರಾ ಗೌಡ ಕೊಲೆ ಮಾಡಿದ ಕಿಂಚ್ಚಿತ್ತು ಪಾಪ ಪ್ರಜ್ಞೆ ಇಲ್ಲದೆ ಸೊಕ್ಕಿನ ನಗೆ ಬೀರಿದ್ದರು.

ಇನ್ನೂ ಈ ಪ್ರಕರಣಕ್ಕೂ ಮುನ್ನಾ ತುಂಬಾನೇ ಹೈಫೈ ಲೈಪ್ ನಡೆಸುತ್ತಿದ್ದ ಪವಿತ್ರಾ, ಬ್ಯೂಟಿಗೆ ತುಂಬಾನೇ ಪ್ರಾಮುಖ್ಯತೆ ಕೊಡುತ್ತಿದ್ದರು. ಹಾಗಾಗಿ ಫ್ಯಾಷನ್ ಲೋಕಕ್ಕೆ ಕಾಲಿಟ್ಟು ಇಂದು ತನ್ನದೇ ಆದ ಬೋಟಿಕ್ ಸೆಂಟರ್‌ ಅನ್ನು ಪ್ರಾರಂಭಿಸಿದ್ದಾರೆ. ಆಗಾಗ ಟ್ರೆಡಿಷನ್ ವೇರ್‌ನಲ್ಲಿ ಫೋಟೋ ಶೂಟ್ ಮಾಡಿಸಿ, ಅವೆಲ್ಲವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ಹವ್ಯಾಸ ಪವಿತ್ರಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂದು ದರ್ಶನ್ ದಾಂಪತ್ಯ ಹಾಳಾಗಬಾರದೆಂದು ಖ್ಯಾತ ನಟಿಗೆ ಬುದ್ಧಿ ಹೇಳಿದ್ದ ಓಂ ಪ್ರಕಾಶ್