Select Your Language

Notifications

webdunia
webdunia
webdunia
Saturday, 12 April 2025
webdunia

ಅಂದು ದರ್ಶನ್ ದಾಂಪತ್ಯ ಹಾಳಾಗಬಾರದೆಂದು ಖ್ಯಾತ ನಟಿಗೆ ಬುದ್ಧಿ ಹೇಳಿದ್ದ ಓಂ ಪ್ರಕಾಶ್

Director Om Prakash

Sampriya

ಬೆಂಗಳೂರು , ಭಾನುವಾರ, 23 ಜೂನ್ 2024 (18:04 IST)
Photo Courtesy X
ಬೆಂಗಳೂರು: ನಟ ದರ್ಶನ್ ಹಾಗೂ ವಿಜಯಲಕ್ಷ್ಮೀ ದಾಂಪತ್ಯ ಹಾಳಾಗಬಾರದೆಂದು ಅಂದು ನಾನು ನಟಿ ನಿಖಿತಾಗೆ ಬುದ್ಧಿ ಹೇಳಿದ್ದೆ ಎಂದು ನಿರ್ದೇಶಕ ಓಂ ಪ್ರಕಾಶ್ ಹೇಳಿದರು.

ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಬಗ್ಗೆ ಇಂದು ಖಾಸಗಿ ಮಾಧ್ಯಮದ ಮುಂದೆ ಮಾತನಾಡಿದ  ಅವರು,  ಯಾವುದೇ ಕಾರಣಕ್ಖೂ ಫ್ಯಾಮಿಲಿ ಡಿಸ್ಟಾರ್ಬ್ ಮಾಡ್ಬೇಡ. ಅದು ತುಂಬಾ ದೊಡ್ಡ ತಪ್ಪಾಗುತ್ತದೆ. 11 ವರ್ಷದ ಹಿಂದೆ ದರ್ಶನ್ ಹಾಗೂ ವಿಜಯಲಕ್ಷ್ಮೀ ಸಂಸಾರ ಹಾಳಾಗಬಾರದೆಂದು ನಟಿ ನಿಖಿತಾಗೆ ಕೂತು ಬುದ್ಧಿ ಹೇಳಿದ್ದೆ.

ದರ್ಶನ್‌ ಹಾಗೂ ನಿಖಿತಾ ಸಂಬಂಧ ಯಾವ ರೀತಿ ಇತ್ತು ಎಂಬುದು ನನಗೆ ಗೊತ್ತಿರ್ಲಿಲ್ಲ. ಆದರೆ ದರ್ಶನ್ ದಾಂಪತ್ಯಕ್ಕೆ ತೊಂದರೆ ಆಗಬಾರದೆಂದು ನಟಿ ನಿಖಿತಾ ಜತೆ ಮಾತನಾಡಿದ್ದೆ. ಇದು ದರ್ಶನ್‌ಗೆ ತಲುಪಿತು. ಇದರಿಂದ ದರ್ಶನ್‌ ನನ್ನ ಜತೆ ಅಂತರ ಕಾಯ್ದುಕೊಂಡರು. ದರ್ಶನ್ ಮತ್ತು ನನ್ನ ಸಂಬಂಧ ಕೆಡಲು ನಿಖಿತಾನೆ ಕಾರಣ ಎಂದು ಆರೋಪಿಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲಿ ಹೀಗಿರುತ್ತದೆ ದರ್ಶನ್ ದಿನಚರಿ