Select Your Language

Notifications

webdunia
webdunia
webdunia
webdunia

ಪವಿತ್ರಾ ಗೌಡಗಿತ್ತಾ ಹೀಗೊಂದು ಚಾಳಿ

ಪವಿತ್ರಾ ಗೌಡಗಿತ್ತಾ ಹೀಗೊಂದು ಚಾಳಿ

Sampriya

ಬೆಂಗಳೂರು , ಗುರುವಾರ, 20 ಜೂನ್ 2024 (19:03 IST)
photo Courtesy Instagram
ಬೆಂಗಳೂರು: ಚಿತ್ರದುರ್ಗಾದ ರೇಣುಕಸ್ವಾಮಿಯನ್ನು ದರ್ಶನ್ ಗ್ಯಾಂಗ್ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಪ್ರಕರಣದಲ್ಲಿ ದರ್ಶನ್ ಆಪ್ತೆ ಎ1 ಆರೋಪಿ ಪವಿತ್ರಾ ಗೌಡಗೆ ನ್ಯಾಯಾಂಗ ಬಂಧನವಾಗಿದೆ.

ಪವಿತ್ರಾ ಗೌಡಗೆ  ಅಶ್ಲೀಲ ಮೆಸೇಜ್ ಕಳುಹಿಸಿದ ಎಂಬ ಕೋಪದಲ್ಲಿ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ, ಚಿತ್ರಹಿಂಸೆ ನೀಡಿ ಕೊಲೆ ನಡೆಸಿತ್ತು. ಇನ್ನೂ ಈ ಕೊಲೆಯಲ್ಲಿ ಪವಿತ್ರಾ ಗೌಡ ಪ್ರಮುಖ ಆರೋಪಿಯಾಗಿದ್ದಾರೆ.

ಇನ್ನು ಪವಿತ್ರಾ ಗೌಡ ಅವರು ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಈ ವೇಳೆ ನಟ ದರ್ಶನ್ ಜತೆ ಪರಿಚಯವಾಗಿ ಸ್ನೇಹವಾಗಿದೆ.

ಕಳೆದ 10 ವರ್ಷಗಳಿಂದ ದರ್ಶನ ಅವರನ್ನು ಪ್ರೀತಿಸಿ ಬದುಕುತ್ತಿರುವುದಾಗಿ ಪವಿತ್ರಾ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಓಪನ್ ಆಗಿ ಹೇಳಿಕೊಂಡಿದ್ದರು. ಅದಲ್ಲದೆ ಕಳೆದ 10 ವರ್ಷಗಳಿಂದ ದರ್ಶನ್ ಜತೆ ಕಳೆದಿರುವ ಕ್ಷಣಗಳನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದರು.

ಪವಿತ್ರಾ ಗೌಡ ಈ ಪೋಸ್ಟ್‌ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಯಾವುದಕ್ಕೂ ಕ್ಯಾರೇ ಎನ್ನದ ಪವಿತ್ರಾ ಗೌಡ 'ಇದೆಲ್ಲ ನಿಮಗೆ ಮೊದಲೇ ಗೊತ್ತಿತ್ತಲ್ವ' ಎಂದು ಕೌಂಟರ್ ಕೊಟ್ಟಿದ್ದರು.

ವಿಜಯಲಕ್ಷ್ಮೀ ಅವರಿಗೆ ಸರಿಸಮಾನ ಎಂದು ಪವಿತ್ರಾ ಗೌಡ  ಸಾಮಾಜಿಕ ಜಾಲತಾಣದಲ್ಲಿ ತೋರಿಸಿಕೊಳ್ಳುತ್ತಿದ್ದರು. ವಿಜಯಲಕ್ಷ್ಮೀ ಅವರು ಯಾವ ಕಲರ್ ಬಟ್ಟೆ ಧರಿಸುತ್ತಾರೆ ಅದೇ ಸೇಮ್‌ ಟು ಸೇಮ್ ಬಟ್ಟೆ ಧರಸಿ ಪವಿತ್ರಾ ಗೌಡ ಫೋಟೋಗೆ ಪೋಸ್ ಕೊಟ್ಟು ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಳ್ಳುತ್ತಿದ್ದರು. ಇದೀಗ ಈ ಫೋಟೋ ವೈರಲ್ ಆಗಿದೆ.

ಬಟ್ಟೆ ಮಾತ್ರವಲ್ಲದೆ ವಿಜಯಲಕ್ಷ್ಮೀ ಅವರು ಓಡಾಡಲು ಬಳಸುವ ಕಾರಿನಲ್ಲು ತಾನೂ ದರ್ಶನ್ ಪತ್ನಿಗೆ ಸಮಾನಳು ಎಂದು ಹೊಸ ಕಾರನ್ನು  ಪಡೆದಿದ್ದರು.

ದರ್ಶನ್ ಅವರು ಪತ್ನಿ ವಿಜಯಲಕ್ಷ್ಮೀಗೆ ರೇಂಜ್ ರೋವರ್ ಕಾರನ್ನು ಗಿಫ್ಟ್‌ ಆಗಿ ನೀಡಿದ್ದರು. ಇದನ್ನು ನೋಡಿದ ಪವಿತ್ರ ತನಗೂ ಅದೇ ಕಾರು ಬೇಕೆಂದು ದರ್ಶನ್ ಬಳಿ ಹಠ ಮಾಡಿ ಪಡೆದುಕೊಂಡಿದ್ದಾರೆಂಬ ಸುದ್ದಿಯಿದೆ.

ಇನ್ನು ವಿಜಯಲಕ್ಷ್ಮೀ ಅವರಲ್ಲಿರುವ ಆಭರಣವೆಲ್ಲ ತನ್ನಲ್ಲೂ ಬೇಕೆಂದು ಖರೀದಿಸಿ ಪೋಟೋ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ದರ್ಶನ್ ಅವರು ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್‌ನನ್ನು ಎಲ್ಲಿ ಊಟಕ್ಕೆ, ಸುತ್ತಾಡಕ್ಕೆ ಕರೆದುಕೊಂಡು ಹೋಗುತ್ತಾರೆ ಆ ಎಲ್ಲ ಸ್ಥಳಕ್ಕೆ ದರ್ಶನ್‌ರೊಂದಿಗೆ ಪವಿತ್ರಾ ತನ್ನ ಮಗಳ ಜತೆ ಹೋಗುತ್ತಾರೆ.

ಯಾವ ಹೊಟೇಲ್‌ನಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮೀ ಊಟ ಮಾಡಿ ಫೋಟೋ ತೆಗೆಸಿಕೊಳ್ಳುತ್ತಾರೆ ಅದೇ ಸ್ಥಳದಲ್ಲಿ ಪವಿತ್ರಾ, ಆಕೆ ಮಗಳು ಹಾಗೂ ದರ್ಶನ್ ತೆರಳಿ ಮತ್ತೇ ಫೋಟೋ ತೆಗೆಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಾರೆ.

ಹೀಗೇ ವಿಜಯಲಕ್ಷ್ಮೀ ಮಾಡಿದ ಸ್ಟೈಲ್‌ನಿಂದ ಹಿಡಿದು ಆಕೆ ಜೀವಿಸುವ ಶೈಲಿಯವರೆಗೂ ಎಲ್ಲವನ್ನು ಪವಿತ್ರಾ ಗೌಡ ಕಾಫಿ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೇ ಪೊಲೀಸ್‌ ಕಸ್ಟಡಿಗೆ ನಟ ದರ್ಶನ್, ಆಪ್ತೆ ಪವಿತ್ರಾಗೆ ಜೈಲು