Publish Date: Sun, 20 Nov 2022 (15:54 IST)
Updated Date: Sun, 20 Nov 2022 (15:58 IST)
ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಪುತ್ರಿ ಇರಾ ಖಾನ್ ಎಂಗೇಜ್‌ಮೆಂಟ್ ಇಂದು ಅದ್ದೂರಿಯಾಗಿ ನಡೆದಿದೆ. ತನ್ನ ಬಹುಕಾಲದ ಗೆಳಯ ನುಪೂರ್ ಜೊತೆ ಇರಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಆಮೀರ್ ಖಾನ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಆಮೀರ್ ಖಾನ್ ಪುತ್ರಿ ಇರಾ ಖಾನ್ ಹೊಸ ಬಾಳಿಗೆ ಕಾಲಿಡುವ ತವಕದಲ್ಲಿದ್ದಾರೆ. ಇತ್ತೀಚೆಗೆ ನುಪೂರ್ ರಿಂಗ್ ಹಾಕಿ, ಇರಾಗೆ ಬಹಿರಂಗವಾಗಿ ಪ್ರಪೋಸ್ ಮಾಡಿದ್ದರು. ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಈ ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್ ಆಗಿದ್ದಾರೆ. ಸದ್ಯ ಆಮೀರ್ ಖಾನ್ ಮಗಳ ನಿಶ್ಚಿತಾರ್ಥದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಮಗಳ ಎಂಗೇಜ್‌ಮೆಂಟ್‌ನಲ್ಲಿ ಸಖತ್ ಆಗಿ ಆಮೀರ್ ಖಾನ್ ಕಾಣಿಸಿಕೊಂಡಿದ್ದಾರೆ. ಹೊಸ ಜೋಡಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.