ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ: ದೀಪಾವಳಿ ದಿನ ಗುಡ್‌ನ್ಯೂಸ್ ಹಂಚಿಕೊಂಡ ರಶ್ಮಿ ಪ್ರಭಾಕರ್

Sampriya
ಸೋಮವಾರ, 20 ಅಕ್ಟೋಬರ್ 2025 (16:25 IST)
Photo Credit X
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಸೀರಿಯಲ್ ಖಾತಿಯ ನಟಿ ರಶ್ಮಿ ಪ್ರಭಾಕರ್ ಅವರು ಇದೇ 3ರಂದು ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ಈ ಸಿಹಿ ಸುದ್ದಿಯನ್ನು ನಟಿ ರಶ್ಮಿ ಪ್ರಭಾಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಮಗುವಿನ ಫೋಟೋವನ್ನು ಹಂಚಿಕೊಂಡು, ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ‘ನಮ್ಮ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ. 3/10/2025ರಂದು ನಮಗೆ ಪುಟ್ಟ ರಾಜಕುಮಾರ ಸಿಕ್ಕಿದ್ದಾನೆ. ಇಡೀ ವಿಶ್ವಕ್ಕೆ ಧನ್ಯವಾದಗಳು’ ಎಂದು ಅಡಿಬರಹ ಬರೆದುಕೊಂಡಿದ್ದಾರೆ.

2022ರ ಏಪ್ರಿಲ್ 25ರಂದು ನಿಖಿಲ್‌ ಎಂಬುವವರನ್ನು ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು. ಇದೀಗ ದಂಪತಿ ಅಕ್ಟೋಬರ್ 3ರಂದು ತಮ್ಮ ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದಾರೆ.

ನಟಿ ರಶ್ಮಿ ಅವರು, ‘ಲಕ್ಷ್ಮೀ ಬಾರಮ್ಮ’, ‘ಜೀವನಚೈತ್ರ’, ‘ಶುಭವಿವಾಹ’, ‘ಮನಸೆಲ್ಲಾ ನೀನೇ’ ಸೇರಿದಂತೆ ಕನ್ನಡ ಹಾಗೂ ಪರಭಾಷೆಯ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು, ನಟಿ ಹಂಚಿಕೊಂಡ ಪೋಸ್ಟ್‌ ನೋಡಿ, ಸ್ನೇಹಿತರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ: ದೀಪಾವಳಿ ದಿನ ಗುಡ್‌ನ್ಯೂಸ್ ಹಂಚಿಕೊಂಡ ರಶ್ಮಿ ಪ್ರಭಾಕರ್

ಕಾಂತಾರ ಸಕ್ಸನ್‌ ಬೆನ್ನಲ್ಲೇ ಬಿಹಾರದ ಪವರ್‌ಫುಲ್‌ ದೇಗುಲಕ್ಕೆ ಡಿವೈನ್‌ ಸ್ಟಾರ್‌ ರಿಷಭ್‌ ಶೆಟ್ಟಿ ಭೇಟಿ

ಮೊದಲ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಎಂಟ್ರಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ

ಅ.25ರಂದು ಅಪ್ಪು ಫ್ಯಾನ್‌ ಡಮ್‌ ಆ್ಯಪ್‌ ಬಿಡುಗಡೆ: ಕಿಚ್ಚ ಸುದೀಪ್ ಧ್ವನಿಯಲ್ಲಿ ಹೊರಬಿತ್ತು ಟ್ರೇಲರ್

BB 12: ಕಿಚ್ಚ ಸುದೀಪ್ ಇದು ಸಾಕಗಲ್ಲ, ಇನ್ನೂ ಬೇಕು, ಇನ್ನೂ ಬೇಕು

ಮುಂದಿನ ಸುದ್ದಿ
Show comments