ಬೆಂಗಳೂರು: 2023 ರಲ್ಲಿ ಸ್ಯಾಂಡಲ್ ವುಡ್ ನ ಅನೇಕ ತಾರೆಯರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಮದುವೆಯಾದ ಪ್ರಮುಖ ಜೋಡಿಗಳು ಯಾರೆಲ್ಲಾ ನೋಡೋಣ.
ವಸಿಷ್ಠ ಸಿಂಹ-ಹರಿಪ್ರಿಯಾ: ಸ್ಯಾಂಡಲ್ ವುಡ್ ನ ಈ ಜೋಡಿ ಡೇಟಿಂಗ್ ನಲ್ಲಿದ್ದಿದ್ದೇ ಯಾರಿಗೂ ಗೊತ್ತೇ ಆಗಿರಲಿಲ್ಲ. ಜನವರಿ 26 ರಂದು ಮೈಸೂರಿನಲ್ಲಿ ಈ ಜೋಡಿ ವಿವಾಹವಾಗಿದ್ದರು.
ಅಭಿಷೇಕ್ ಅಂಬರೀಶ್-ಅವಿವಾ: ರೆಬಲ್ ಸ್ಟಾರ್ ಅಂಬರೀಶ್-ಸುಮಲತಾ ಪುತ್ರ, ನಟ ಅಭಿಷೇಕ್ ಮತ್ತು ಅವಿವಾ ಜೋಡಿ ಜೂನ್ 5 ರಂದು ಅರಮನೆ ಮೈದಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಹರ್ಷಿಕಾ ಪೂಣಚ್ಚ-ಭುವನ್: ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಕೊಡಗಿನ ಈ ಜೋಡಿ ಆಗಸ್ಟ್ 24 ರಂದು ಕೊಡಗಿನಲ್ಲಿ ವಿವಾಹವಾದರು.
ವಾಸುಕಿ ವೈಭವ್-ಬೃಂದಾ: ಸ್ಯಾಂಡಲ್ ವುಡ್ ಸಂಗೀತ ನಿರ್ದೇಶಕ ವಾಸುಕಿ ವೈಭವ್, ಬೃಂದಾ ಮದುವೆ ನವಂಬರ್ 16 ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ನೆರವೇರಿತು.
ಶಿಷ್ಯ ದೀಪಕ್-ಬೃಂದಾ ಗೌಡ: ಶಿಷ್ಯ ಸಿನಿಮಾ ಖ್ಯಾತಿಯ ನಟ ದೀಪಕ್ ಮತ್ತು ಬೃಂದಾ ನವಂಬರ್ 24 ರಂದು ಅದ್ಧೂರಿಯಾಗಿ ಮದುವೆ ಮಾಡಿಕೊಂಡರು.
ಪೂಜಾ ಗಾಂಧಿ-ವಿಜಯ್ ಘೋರ್ಪಡೆ: ಮುಂಗಾರು ಮಳೆ ಚೆಲುವು ಪೂಜಾ ಗಾಂಧಿ-ವಿಜಯ್ ಘೋರ್ಪಡೆ ನವಂಬರ್ 29 ರಂದು