Select Your Language

Notifications

webdunia
webdunia
webdunia
webdunia

ಗೂಗಲ್ ನಲ್ಲಿ ಫುಡ್ ಸರ್ಚ್ ಮಾಡುವುದು ಮಾತ್ರವಲ್ಲ ಆರ್ಡರ್ ಕೂಡ ​ಮಾಡಬಹುದಂತೆ. ಹೇಗೆ ಗೊತ್ತಾ?

ಗೂಗಲ್ ನಲ್ಲಿ ಫುಡ್ ಸರ್ಚ್ ಮಾಡುವುದು ಮಾತ್ರವಲ್ಲ ಆರ್ಡರ್ ಕೂಡ ​ಮಾಡಬಹುದಂತೆ. ಹೇಗೆ ಗೊತ್ತಾ?
ಬೆಂಗಳೂರು , ಮಂಗಳವಾರ, 28 ಮೇ 2019 (08:58 IST)
ಬೆಂಗಳೂರು : ಗೂಗಲ್ ನಲ್ಲಿ ಎಲ್ಲಾ ವಿಧದ ಆಹಾರಗಳನ್ನು ಸರ್ಚ್ ಮಾಡಬಹುದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಇದೀಗ ಗೂಗಲ್ ನಲ್ಲಿ ಗ್ರಾಹಕರು ತಮ್ಮಿಷ್ಟದ ಆಹಾರವನ್ನು ಆರ್ಡರ್ ಕೂಡ ​ ಮಾಡಬಹುದಾಗಿದೆ.




ಹೌದು. ಗೂಗಲ್​ ತನ್ನ ಬಳಕೆದಾರರಿಗೆ ಫುಡ್​ ಆರ್ಡರ್​ ಮಾಡುವ ಹೊಸ ಆಯ್ಕೆಯೊಂದನ್ನು ಪರಿಚಯಿಸುತ್ತಿದ್ದು, ಗ್ರಾಹಕರು ತಮ್ಮಿಷ್ಟದ ಆಹಾರವನ್ನು ಸರ್ಚ್​ ಇಂಜಿನ್​ ಮತ್ತು ಗೂಗಲ್​ ಮ್ಯಾಪ್​ನಿಂದ ​​ ಆರ್ಡರ್​ ಮಾಡ ಬಹುದಾಗಿದೆ.  ಗೂಗಲ್​​ ಸರ್ಚ್​ ಇಂಜಿನ್​ನಲ್ಲೇ ‘ಆರ್ಡರ್​ ಆನ್​ಲೈನ್​‘ ಬಟನ್ ಆಯ್ಕೆಯನ್ನು​ ನೀಡಿದ್ದು, ಇದರ ಮೂಲಕ ಫುಡ್​ ಆರ್ಡರ್​ ಮಾಡಬಹುದಾಗಿದೆ. ​​


ಫುಡ್​ ಡೆಲಿವರಿಗಾಗಿ ಎರಡು ಆಯ್ಕೆಗಳು ಇರಲಿದ್ದು, ಗ್ರಾಹಕರು ರೆಸ್ಟೊರೆಂಟ್​ ಮೂಲಕ ಫುಡ್​​ ಸ್ವೀಕರಿಸಬಹುದು ಅಥವಾ ಹೋಮ್​ ಡೆಮಿವರಿ ಮೂಲಕ ಆರ್ಡರ್​ ಮಾಡಬಹುದಾಗಿದೆ. ಇದಕ್ಕಾಗಿ ಕಂಪೆನಿ ಹೋಮ್​ ಡೆಲಿವರಿ ಪಾಟ್ನರ್ಸ್​​​​​​ಗಳ ಸಹಯೋಗದೊಂದಿದೆ ಕಾರ್ಯನಿರ್ವಹಿಸಲು ಮುಂದಾಗಿದೆ. ಗೂಗಲ್​​ ಸಂಸ್ಥೆ ಈ ಹೊಸ ಸೇವೆಯನ್ನು ಯುಎಸ್​​ ನಲ್ಲಿ ಆರಂಭಿಸಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೂ ಈ ಸೌಲಭ್ಯವನ್ನು ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಿದೆ ಎಂಬುದಾಗಿ ತಿಳಿದುಬಂದಿದೆ.



 
 

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಪ್ರಮಾಣವಚನ ಸಮಾರಂಭಕ್ಕೆ ರಜನೀಕಾಂತ್, ಕಮಲ್ ಹಾಸನ್ ಗೆ ಆಹ್ವಾನ