ಎಚ್ಚರ! ಈ ಆಹಾರ ಸೇವಿಸಿದರೆ ಮುಖದ ಕಾಂತಿ ಹಾಳಾಗುತ್ತದೆ

ಬುಧವಾರ, 15 ಮೇ 2019 (07:00 IST)
ಬೆಂಗಳೂರು : ಮುಖದಲ್ಲಿ ಮೊಡವೆಗಳು ಮೂಡಿದರೆ ಮುಖದ ಸ್ಕಿನ್ ಹಾಳಾಗುತ್ತದೆ. ಇದರಿಂದ ಮುಖದ ಅಂದ ಕೆಡುತ್ತದೆ. ಈ ರೀತಿ ಆಗಬಾರದಂತಿದ್ದರೆ ಮೊಡವೆಗಳು ಮೂಡಲು ಸಹಾಯಕವಾಗುವಂತಹ ಈ ಆಹಾರ ಪದಾರ್ಥಗಳನ್ನು ಸೇವಿಸಬಾರದು.*ಮಸಾಲೆಯುಕ್ತ ಆಹಾರದಿಂದ ದೂರ ಇರುವುದು ಒಳ್ಳೆಯದು. ಇದು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ರಕ್ತನಾಳಗಳನ್ನು ಹಿಗ್ಗಿಸುತ್ತದೆ.

 

* ಕಾಫಿಯಲ್ಲಿರುವ ಕೆಫೀನ್ ಒತ್ತಡದ ಹಾರ್ಮೋನನ್ನು ಹೆಚ್ಚಿಸುತ್ತದೆ. ಇದ್ರಿಂದ ಚರ್ಮ ಹಾಳಾಗುತ್ತದೆ. ಮುಖ ಕಪ್ಪಾಗಲು ಶುರುವಾಗುತ್ತದೆ.

 

* ಬಿಳಿಯ ಬ್ರೆಡ್ ನಿಂದ ಇನ್ಸುಲಿನ್ ಅಂಶ ಹೆಚ್ಚಾಗುತ್ತದೆ. ಚರ್ಮದಲ್ಲಿರುವ ತೈಲ ಪ್ರಮಾಣ ಹೆಚ್ಚಾಗುತ್ತದೆ. ಜೊತೆಗೆ ಚರ್ಮದ ಹೊಳಪು ಕಡಿಮೆಯಾಗುತ್ತದೆ.

 

* ಕರಿದ ಪದಾರ್ಥಗಳು ಹಾಗೆ ತಂಪು ಪಾನೀಯಗಳು ಕೂಡ ಆರೋಗ್ಯದ ಜೊತೆಗೆ ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೀಲುನೋವು ಸಮಸ್ಯೆಗೆ ಉತ್ತಮ ಮನೆಮದ್ದು ಈ ಹೂವು