Select Your Language

Notifications

webdunia
webdunia
webdunia
webdunia

ಈ ಒಂದು ಆಹಾರವನ್ನು ಸೇವಿಸುತ್ತಾ ಬಂದರೆ ಪಾರ್ಶ್ವವಾಯು (ಲಕ್ವ) ರೋಗದಿಂದ ದೂರವಿರಬಹುದಂತೆ

ಈ ಒಂದು ಆಹಾರವನ್ನು ಸೇವಿಸುತ್ತಾ ಬಂದರೆ ಪಾರ್ಶ್ವವಾಯು (ಲಕ್ವ) ರೋಗದಿಂದ ದೂರವಿರಬಹುದಂತೆ
ಬೆಂಗಳೂರು , ಭಾನುವಾರ, 12 ಮೇ 2019 (07:06 IST)
ಬೆಂಗಳೂರು : ವಯಸ್ಸಾದ ಬರುತ್ತಿದ್ದಂತೆ ಕೆಲವರು ಪಾರ್ಶ್ವವಾಯು (ಲಕ್ವ) ರೋಗಕ್ಕೆ ತುತ್ತಾಗುತ್ತಾರೆ. ಇದರಿಂದ ಅವರು ತಮ್ಮ ದೇಹದ ಒಂದು ಭಾಗದ ಸ್ವಾದೀನವನ್ನು ಕಳೆದುಕೊಳ್ಳುತ್ತಾರೆ. ಈ ಒಂದು ಆಹಾರವನ್ನು ಸೇವಿಸುತ್ತಾ ಬಂದರೆ ಅಂತಹ ವ್ಯಕ್ತಿ ಈ ಪಾರ್ಶ್ವವಾಯು (ಲಕ್ವ) ರೋಗದಿಂದ ದೂರವಿರಬಹುದು ಎಂದು ಆಹಾರ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.




ಹೌದು. ಅಮೆರಿಕದ ಖ್ಯಾತ ಆಹಾರ ವಿಜ್ಞಾನಿ ಹಾಗೂ ಎಪಿಡ್ ಸ್ಟ್ಯಾಟ್ ಇನ್ಸ್ ಟಿಟ್ಯೂಟ್ ನ ಹಿರಿಯ ಪ್ರಾಧ್ಯಾಪಕ ಡಿ.ಅಲೆಕ್ಸಾಂಡರ್ 1982 ರಿಂದ 2015ರ ವರೆಗೆ ಸುಧೀರ್ಘ ಅಧ್ಯಯನ ಕೈಗೊಂಡು ನೂತನ ವರದಿಯನ್ನು ಸಿದ್ಧಪಡಿಸಿದ್ದು, ಅದರ ಪ್ರಕಾರ ಯಾವ ವ್ಯಕ್ತಿಗಳು ನಿತ್ಯ ಮೊಟ್ಟೆ ಸೇವಿಸುತ್ತಾ ಬಂದಿದ್ದಾರೆಯೋ ಅವರು ಪಾರ್ಶ್ವವಾಯು ರೋಗದಿಂದ ಮುಕ್ತರಾಗಿದ್ದರಂತೆ. ಆದರೆ ಮೊಟ್ಟೆ ತಿನ್ನದ ಅಥವಾ ಅಪರೂಪಕ್ಕೊಮ್ಮೆ ಮೊಟ್ಟೆ ಸೇವಿಸುತ್ತಿದ್ದವರಲ್ಲಿ ಈ ಖಾಯಿಲೆ ಪರಿಣಾಮ ಹೆಚ್ಚಿತ್ತಂತೆ.


ಮೊಟ್ಟೆಯಲ್ಲಿರುವ ವಿಶಿಷ್ಠ ಮತ್ತು ಯಥೇಚ್ಛ ಪ್ರೊಟೀನ್ ಗಳು ಮಾನವನ ದೇಹ ಮತ್ತು ಮೆದುಳಿನ ಆರೋಗ್ಯವನ್ನು ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿ ಸಹಕರಿಸುತ್ತವೆಯಂತೆ. ಪ್ರಮುಖವಾಗಿ ಮೊಟ್ಟೆ ಮಾನವನ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ, ಇ ಮತ್ತು ಎ ಅಂಶಗಳನ್ನು ಪೂರೈಸುತ್ತದೆಯಂತೆ. ಇದಲ್ಲದೆ ಮೊಟ್ಟೆಯ ಹಳದಿ ಭಾಗ ಮಾನವನ ದೇಹಕ್ಕೆ ಅಗತ್ಯವಾದ ಆ್ಯಂಟಿ ಆಕ್ಸಿಡೆಂಟ್, ಜೀಕ್ಸಾಂಥಿನ್ ಅಂಶಗಳನ್ನು ಪೂರೈಸುತ್ತದೆಯಂತೆ. ಅದರಂತೆ ನಿತ್ಯ ಮೊಟ್ಟೆ ತಿನ್ನುವುದರಿಂದ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವನ್ನು ಶೇ.12ರಷ್ಟು ದೂರವಿಡಬಹುದು ಎಂದು ಅಲೆಕ್ಸಾಂಡರ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದಪ್ಪ ಹೊಟ್ಟೆಯನ್ನು ಕರಗಿಸಲು ಈ ಆಹಾರಗಳನ್ನು ಸೇವಿಸಿ