Select Your Language

Notifications

webdunia
webdunia
webdunia
webdunia

ದಪ್ಪ ಹೊಟ್ಟೆಯನ್ನು ಕರಗಿಸಲು ಈ ಆಹಾರಗಳನ್ನು ಸೇವಿಸಿ

ದಪ್ಪ ಹೊಟ್ಟೆಯನ್ನು ಕರಗಿಸಲು ಈ ಆಹಾರಗಳನ್ನು ಸೇವಿಸಿ
ಬೆಂಗಳೂರು , ಭಾನುವಾರ, 12 ಮೇ 2019 (07:01 IST)
ಬೆಂಗಳೂರು : ಮಹಿಳೆ ಹಾಗೂ ಪುರುಷರಲ್ಲಿ ಇಬ್ಬರಲ್ಲೂ ಕಂಡು ಬರುವ ಸಮಸ್ಯೆಯೆಂದರೆ ಹೊಟ್ಟೆ ದಪ್ಪವಾಗುವುದು. ಇದರಿಂದ ಅವರ  ದೇಹದ ಅಂದ ಕೆಡುತ್ತದೆ. ಅಂತವರು ತಮ್ಮ ಹೊಟ್ಟೆಯನ್ನು ಕರಗಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ.




* ಡಯಟ್‌ ಎಂದು ಬಾಯಿಗೆ ರುಚಿಯಿಲ್ಲದ ಆಹಾರವನ್ನು ತಿಂದು ಕಷ್ಟ ಪಡುವ ಬದಲು ರಾಗಿ, ಗೋಧಿ, ಮೊಳಕೆ ಕಾಳುಗಳನ್ನು ಬಳಸಿ ರುಚಿ-ರುಚಿಯಾದ ಪದಾರ್ಥ ಮಾಡಿ ಸೇವಿಸಿ.


  *ಪ್ರತಿದಿನ ಬ್ರೇಕ್ ಫಾಸ್ಟ್ ಗೆ ಬ್ರೆಡ್ ಸ್ಯಾಂಡ್‌ವಿಚ್‌, ಉಪ್ಪಿಟ್ಟು, ಇಡ್ಲಿ, ಮೊಳಕೆ ಕಾಳುಗಳು ಹೀಗೆ ಏನಾದರೂ ಆರೋಗ್ಯಕರ ಆಹಾರವನ್ನು ತಿನ್ನಿ.


* ಹೆಸರು ಬೇಳೆ ಪಾಯಸ, ಕೋಸಂಬರಿ ಮಾಡುವುದಕ್ಕಷ್ಟೇ ಅಲ್ಲ. ಇದರಲ್ಲಿ ಹೇರಳವಾಗಿ ಕ್ಯಾಲ್ಶಿಯಂ, ನಾರಿನಂಶ ಇದ್ದು ಕೊಬ್ಬು ಕರಗಿಸುವ ಗುಣವಿದೆ. ಸಾಕಷ್ಟು ಕ್ಯಾಲೊರಿ ನೀಡುವುದರಿಂದ ಬೇಗನೇ ನಮ್ಮ ಹೊಟ್ಟೆ ತುಂಬುತ್ತದೆ.


* ಸೋರೆಕಾಯಿಯಲ್ಲಿ ವಿಟಮಿನ್ ಎ, ಸಿ, ಕ್ಯಾಲ್ಶಿಯಂ, ಮ್ಯಾಗ್ನಿಶಿಯಂ, ಪೋಸ್ಪರಸ್ ಮತ್ತು ಪೊಟೇಷಿಯಂ ಹೇರಳವಾಗಿದೆ. ಇದರಲ್ಲಿರುವ ವಿಟಮಿನ್ ಗಳು ಬೊಜ್ಜು ಕರಗಿಸಲು ನೆರವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

2 ನೇ ಪತ್ನಿಯೂ ರಾತ್ರಿಯಾದರೆ ಅದನ್ನೇ ಮಾಡುತ್ತಿದ್ದಾಳೆ... ಏನು ಮಾಡಲಿ