Publish Date: Wed, 15 May 2019 (06:43 IST)
Updated Date: Wed, 15 May 2019 (06:57 IST)
ಬೆಂಗಳೂರು : ಸೋಶಿಯಲ್ ಮೀಡಿಯಾಗಳಲ್ಲಿ ತುಂಬಾನೇ ಸೇಫ್ ಎಂದುಕೊಂಡಿದ್ದ ವಾಟ್ಸ್ ಆ್ಯಪ್ ಮೂಲಕವೂ ಹ್ಯಾಕರ್ ಗಳು ನಮ್ಮ ವೈಯಕ್ತಿಕ ಡೇಟಾವನ್ನು ಕದಿಯುತ್ತಿದ್ದಾರೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ನಮ್ಮ ವೈಯಕ್ತಿಕ ಡೇಟಾ ಸುರಕ್ಷಿತವಾಗಿರಿಸಲು ವಾಟ್ಸ್ ಆ್ಯಪ್ ತುಂಬಾ ಸಹಕಾರಿ ಎಂದು ತಜ್ಞರು ಹೇಳುತ್ತಿದ್ದರು. ಅಲ್ಲದೇ ಕೊನೆಯವರೆಗೂ ನಮ್ಮ ಪರ್ಸನಲ್ ಡಾಟಾ, ವಿಡಿಯೋ ಮತ್ತು ಪೋಟೋಸ್, ಮೆಸೇಜ್ಗಳನ್ನು ವಾಟ್ಸ್ಆ್ಯಪ್ ಸಂಸ್ಥೆ ಭದ್ರವಾಗಿ ಉಳಿಸಿಕೊಳ್ಳುತ್ತದೆ ಎನ್ನಲಾಗಿತ್ತು.
ಆದರೆ ಇತ್ತೀಚೆಗೆ ಇಸ್ರೇಲ್ ಮೂಲದ ಎನ್.ಎಸ್.ಒ ಎಂಬ ಕಂಪನಿ ಡಾಟಾ ಕಳವು ಬಗ್ಗೆ ವ್ಯಾಟ್ಸ್ಆ್ಯಪ್ ಸಂಸ್ಥೆಗೆ ಮಾಹಿತಿ ನೀಡಿದ್ದು, ಕರೆಯ ಮೂಲಕ ಬಳಕೆದಾರನ ವ್ಯಯಕ್ತಿಕ ಮಾಹಿತಿಯನ್ನು ಕದಿಯುತ್ತಿದೆ ಎಂದು ತಿಳಿಸಿದೆ. ವಾಟ್ಸ್ಆ್ಯಪ್ ವರ್ಶನ್ V2.19.134, ಬ್ಯುಸಿನಸ್ v2.19.44, ವಾಟ್ಸ್ಆ್ಯಪ್ iOS v2.19.51, ವಾಟ್ಸ್ಆ್ಯಪ್ ಬ್ಯುಸಿನೆಸ್ iOS v2.19.51, ವಾಟ್ಸ್ಆ್ಯಪ್ ವಿಂಡೋಸ್ v2.18.348, ವಾಟ್ಸ್ಆ್ಯಪ್ ಟೈಝೆನ್ v2.18.15 ವರ್ಶನ್ ಗಳಲ್ಲಿ ಮಾಹಿತಿ ಕದಿಯಲಾಗುತ್ತಿದೆ ಎಂದು ಇಸ್ರೇಲ್ ಕಂಪನಿ ತಿಳಿಸಿದೆ.
ಆದ್ದರಿಂದ ವಾಟ್ಸ್ಆ್ಯಪ್ ಸಂಸ್ಥೆ ಇದೇ ಮೇ.10ರಂದು iOS ಮತ್ತು ಆ್ಯಂಡ್ರಾಯ್ಡ್ ಬಳಕೆದಾರಿಗೆ ಅಪ್ಡೇಟ್ ವರ್ಷನ್ ಬಿಡುಗಡೆ ಮಾಡಿದೆ. ಬಳಕೆದಾರರು ಗೂಗಲ್ ಪ್ಲೇಸ್ಟೋರ್ ಹೋಗಿ ಕೂಡಲೇ ನೂತನ ವಾಟ್ಸ್ ಆ್ಯಪ್ ವರ್ಶನ್ ಅಪ್ಡೇಟ್ ಮಾಡಿಕೊಳ್ಳಬೇಕಿದೆ. ಐಫೋನ್ ಬಳಕೆದಾರರು ಆ್ಯಪ್ ಸ್ಟೋರ್ ಮೂಲಕ ಅಪ್ಡೇಟ್ ಮಾಡಬಹುದು ಎಂಬುದಾಗಿ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ