Select Your Language

Notifications

webdunia
webdunia
webdunia
webdunia

ಸೋಶಿಯಲ್ ಮೀಡಿಯಾದಲ್ಲಿ ಎಂ.ಬಿ.ಪಾಟೀಲ ಮತ್ತು ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್; ವ್ಯಕ್ತಿಯ ವಿರುದ್ಧ ದೂರು ದಾಖಲು

ಸೋಶಿಯಲ್ ಮೀಡಿಯಾದಲ್ಲಿ ಎಂ.ಬಿ.ಪಾಟೀಲ ಮತ್ತು ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್; ವ್ಯಕ್ತಿಯ ವಿರುದ್ಧ ದೂರು ದಾಖಲು
ಬೆಳಗಾವಿ , ಗುರುವಾರ, 21 ಮಾರ್ಚ್ 2019 (09:47 IST)
ಬೆಳಗಾವಿ : ಸೋಶಿಯಲ್ ಮೀಡಿಯಾದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಗೋಕಾಕ್‌ ಪಟ್ಟಣದ ಕೊಟ್ರೇಶ್‌ ಪಟ್ಟಣಶೆಟ್ಟಿ ಎಂಬುವರ ವಿರುದ್ಧ ದೂರು ದಾಖಲಾಗಿದೆ.


ಗೋಕಾಕ್‌ ಪಟ್ಟಣದ ಕೊಟ್ರೇಶ್‌ ಪಟ್ಟಣಶೆಟ್ಟಿ ಎಂಬುವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ''ಧರ್ಮ ಒಡೆದು ಪರಸ್ಪರ ಸಮುದಾಯಗಳಲ್ಲಿ ಜಗಳ ಹಚ್ಚಿದ ಮಾತೆ ಮಹಾದೇವಿ ಈಗಾಗಲೇ ತಕ್ಕ ಶಿಕ್ಷೆ ಅನುಭವಿಸಿದ್ದಾರೆ. ಅದೇ ರೀತಿ ತಪ್ಪು ಮಾಡಿರುವ ಗೃಹ ಸಚಿವ ಎಂ.ಬಿ.ಪಾಟೀಲ ಮತ್ತು ಸಿದ್ದರಾಮಯ್ಯ ಅವರನ್ನೂ ಮಾತೆ ಮಹಾದೇವಿ ಬೇಗ ತಮ್ಮ ಬಳಿಗೆ ಕರೆಸಿಕೊಳ್ಳಲಿ'', ಎಂದು ಪೋಸ್ಟ್ ಮಾಡಿದ್ದರು.


ಈ ಸಂಬಂಧ ಬೆಳಗಾವಿಯ ನ್ಯಾಯವಾದಿ ಆರ್‌.ಪಿ.ಪಾಟೀಲ ಮಾ.18ರಂದು ಜಿಲ್ಲಾ ಪೊಲೀಸ್‌ ವರಿಷ್ಠರ ಮೂಲಕ ದೂರು ದಾಖಲಿಸಿದ್ದರು. ಅವಹೇಳನಕಾರಿ ಪೋಸ್ಟ್‌ ಮಾಡಿದ ಯುವಕನ ಮೊಬೈಲ್‌ ವಶಪಡಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪ ಸಾಬೀತಾದರೇ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹವಾದ ಮೊದಲ ರಾತ್ರಿ ನಾನು ಆಕೆಯ ಜೊತೆ ಸಂಭೋಗ ಮಾಡುವುದು ಒಳ್ಳೆಯದೇ? ಕೆಟ್ಟದೇ?