Publish Date: Wed, 20 Mar 2019 (17:39 IST)
Updated Date: Wed, 20 Mar 2019 (17:42 IST)
ಚುನಾವಣೆಗೆ ದಿನಗಣನೆ ಆರಂಭಗೊಂಡಿರುವಂತೆ ಅಭ್ಯರ್ಥಿಗಳು ಪಕ್ಷಾಂತರ ಪರ್ವಕ್ಕೆ ಮೊರೆ ಹೋಗಿದ್ದಾರೆ. ಏತನ್ಮಧ್ಯೆ ನಾನಂತೂ ಯಾವುದೇ ಕಾರಣಕ್ಕೂ ಜೆಡಿಎಸ್ ನಿಂದ ಸ್ಪರ್ಧೆ ಮಾಡೋದಿಲ್ಲ ಅಂತ ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.
ವಿಜಯಪುರ ಮೀಸಲು ಮತಕ್ಷೇತ್ರಕ್ಕೆ ಸಮಿಶ್ರ ಪಕ್ಷಗಳ ವತಿಯಿಂದ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರೊಬ್ಬರು ಸ್ಪಷ್ಟನೆ ನೀಡಿದ್ದಾರೆ.
ತಮ್ಮ ನಿಲುವನ್ನು ತಿಳಿಸಿರುವ ಮಾಜಿ ಶಾಸಕ ರಾಜು ಆಲಗೂರ್, ಜೆಡಿಎಸ್ ನಿಂದ ಸ್ಪರ್ಧಿಸುತ್ತಾರೆ ಎಂಬುದೆಲ್ಲ ಸುಳ್ಳು ಎಂದಿದ್ದಾರೆ.
ನನಗೆ ಬಿಜೆಪಿ ಹಾಗೂ ಜೆಡಿಎಸ್ ನವರು ಹಣ ಕೊಡತೀವಿ ಟಿಕೆಟ್ ನೀಡುತ್ತೇವೆ ಪಕ್ಷಕ್ಕೆ ಬನ್ನಿ ಎಂದರು. ಇದೆಲ್ಲವನ್ನು ನಾನು ನೀರಾಕರಿಸಿದ್ದೇನೆ. ನಾನು ಸ್ಪರ್ಧಿಸುವುದಾದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ. ಯಾವುದೇ ಕಾರಣಕ್ಕೂ ನಾನು ಬೇರೆ ಪಕ್ಷದಿಂದ ಸ್ಪರ್ಧಿಸುವುದಿಲ್ಲ ಅಂತ ರಾಜು ಆಲಗೂರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.