Select Your Language

Notifications

webdunia
webdunia
webdunia
webdunia

ಬಿಜೆಪಿಗೆ ಮತ್ತೆ ಶಾಕಿಂಗ್!

ಬಿಜೆಪಿಗೆ ಮತ್ತೆ ಶಾಕಿಂಗ್!
ಹಾಸನ , ಬುಧವಾರ, 20 ಮಾರ್ಚ್ 2019 (15:01 IST)
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕ್ಷೇತ್ರದಲ್ಲಿಯೇ ಪಕ್ಷಾಂತರ ಪರ್ವ ಮುಂದುವರಿದಿದೆ.

ಹಾಸನ ಲೋಕಸಭೆ ಅಖಾಡದಲ್ಲಿ ಮುಂದುವರೆದ ಪಕ್ಷಾಂತರ ಪರ್ವ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಎ.ಮಂಜು ಬಿಜೆಪಿ ಸೇರ್ಪಡೆ ವಿರೋಧಿಸಿದ್ದ ಯೋಗಾರಮೇಶ್ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ.

ಬದ್ಧ ವೈರಿಗಳೆಂದೇ ಗುರುತಿಸಿಕೊಂಡಿದ್ದ ಯೋಗಾ ಮತ್ತು ಮಂಜು ಪರಸ್ಪರ ವಿರೋಧಿಸುತ್ತಿದ್ದರು.

ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು ಯೋಗಾರಮೇಶ್ ಮತ್ತು ಮಂಜು. ಬೆಂಗಳೂರಿನಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಯೋಗಾ ರಮೇಶ್ ಹಾಸನ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿದ್ದಾರೆ.

ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಎ.ಮಂಜು ಅವರ ಪುತ್ರ ಮಂತರ್ ಗೌಡಗೆ ಟಿಕೆಟ್ ಬೇಡಿಕೆ ಇಟ್ಟು ಬಿಜೆಪಿಗೆ ಎ. ಮಂಜು ಸೇರ್ಪಡೆಗೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಅರಕಲಗೂಡು ಜಿ.ಪಂ ಸದಸ್ಯರಾಗಿದ್ದಾರೆ ಮಂತರ್.

ಬಿಜೆಪಿ ಟಿಕೆಟ್ ಕೈ ತಪ್ಪುವ ಸೂಚನೆ ಅರಿತ ಹಿನ್ನೆಲೆಯಲ್ಲಿ ಯೋಗಾರಮೇಶ್ ಕೈ ಹಿಡಿದ್ರಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ಎ.ಮಂಜು ಬಿಜೆಪಿ ಸೇರ್ಪಡೆ ಬೆನ್ನಲೆ ಬಿಜೆಪಿ ಪಕ್ಷವನ್ನು ಮುಖಂಡರು ತೊರೆಯುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ನಾಮಪತ್ರಕ್ಕೆ ಪೂಜೆ ಸಲ್ಲಿಸಿದ್ದೆಲ್ಲಿ?