ನವದೆಹಲಿ: ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿ ದೀಪಾವಳಿ ವೇಳೆಗೆ ಜನರಗೆ ಜಿಎಸ್ ಟಿ ಕಡಿತದ ಉಡುಗೊರೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇಂದು ಜಿಎಸ್ ಟಿ ಮಂಡಳಿ ಸಭೆ ನಡೆಸಲಿದೆ. ಆದರೆ ಜಿಎಸ್ ಟಿ ಕಡಿತಕ್ಕೆ ಇಂಡಿಯಾ ಒಕ್ಕೂಟದ ರಾಜ್ಯಗಳು ವಿರೋಧಿಸುತ್ತಿರುವುದು ಯಾಕೆ?
ಅದರಂತೆ ಇಂದು ದೇಶದ ತೆರಿಗೆ ವ್ಯವಸ್ಥೆಗೆ ಅತೀ ದೊಡ್ಡ ಬದಲಾವಣೆ ತರಲು ಇಂದು ಜಿಎಸ್ ಟಿ ಮಂಡಳಿ ಸಭೆ ನಡೆಸಲಿದೆ. ಇಂದಿನಿಂದ ಎರಡು ದಿನಗಳ ಕಾಲ ಸಭೆ ನಡೆಯಲಿದ್ದು ಈ ಸಭೆಯಲ್ಲಿ ತೆರಿಗೆ ಕಡಿತ, ಜಿಎಸ್ ಟಿ ಕಡಿತದ ಬಗ್ಗೆ ಪ್ರಮುಖವಾಗಿ ತೀರ್ಮಾನವಾಗಲಿದೆ.
ಈಗ ಇರುವ ನಾಲ್ಕು ಜಿಎಸ್ ಟಿ ಸ್ಲ್ಯಾಬ್ ಗಳ ಬದಲಾಗಿ ಎರಡು ಸ್ಲ್ಯಾಬ್ ಗಳಿಗೆ ಕಡಿತಗೊಳಿಸಲು ಕೇಂದ್ರ ತೀರ್ಮಾನಿಸಿದೆ. ಇದರಿಂದ ಮಧ್ಯಮ ವರ್ಗದವರಿಗೆ ಲಾಭವಾಗಲಿದೆ. ದಿನ ಬಳಕೆಯ ಅನೇಕ ವಸ್ತುಗಳ ಬೆಲೆ ಕಡಿತವಾಗಲಿದೆ.
ಆದರೆ ಇದಕ್ಕೆ ಇಂಡಿಯಾ ಒಕ್ಕೂಟದ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಇದರಿಂದ ರಾಜ್ಯಕ್ಕೆ ಬರುವ ಜಿಎಸ್ ಟಿ ಆದಾಯದಲ್ಲಿ ಕಡಿತವಾಗಲಿದೆ ಎನ್ನುವುದು ಆ ರಾಜ್ಯಗಳ ಆರೋಪವಾಗಿದೆ. ಹೀಗಾಗಿ ಆ ನಷ್ಟವನ್ನು ಕೇಂದ್ರ ಭರಿಸಿಕೊಡಬೇಕು ಎಂಬುದು ಅವರ ಒತ್ತಾಯ. ಆದರೆ ಉಳಿದಂತೆ ಬಹುತೇಕ ರಾಜ್ಯಗಳು ಇದಕ್ಕೆ ಒಪ್ಪಿದ್ದು, ಸೆಪ್ಟೆಂಬರ್ 22 ರಿಂದಲೇ ಹೊಸ ಜಿಎಸ್ ಟಿ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.